alex Certify 18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ ಮಾಡುವ ಅಭ್ಯಾಸವಿದೆ.

ಬ್ಯಾಡ್‌ಲ್ಯಾಂಡ್ಸ್‌ಚಗ್ಸ್‌ ಹೆಸರಿನ ಯೂಟ್ಯೂಬ್ ಚಾನೆಲ್ಲಿನಲ್ಲಿ ತಮ್ಮ ಈ ಹೊಸ ಸಾಹಸದ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ ಎರಿಕ್. ಗಿನ್ನೆಸ್ ವಿಶ್ವ ದಾಖಲೆಯೊಂದನ್ನು ಮಾಡಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದ ಎರಿಕ್ ಈ ರೀತಿಯಲ್ಲಿ ಅದನ್ನು ಸಾಕಾರಗೊಳಿಸಿದ್ದಾರೆ.

BIG BREAKING: 24 ಗಂಟೆಯಲ್ಲಿ 40,000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಏರುತ್ತಲೇ ಇದೆ ಸಾವಿನ ಸಂಖ್ಯೆ…!

ನ್ಯೂಯಾರ್ಕ್‌ನ ಸೆಲ್ಡೆನ್‌ನಲ್ಲಿ ಈ ದಾಖಲೆ ನಿರ್ಮಿಸಿದ ಎರಿಕ್, ಇದಕ್ಕಾಗಿ ಎರಡು ಲೀಟರ್‌ನ ಸಕ್ಕರೆ-ರಹಿತ ಎನ್ನಲಾಗುವ ಕೋಲಾ ಬಾಟಲಿಯನ್ನು ಖಾಲಿ ಮಾಡಿದ್ದಾರೆ. ಕಾರ್ಬೋನೇಟೆಡ್ ಪೇಯಗಳನ್ನು ಹೀರುವ ಅಭ್ಯಾಸ ಇರುವ ಎರಿಕ್‌, “ಸೋಡಾ ಬಲು ರುಚಿಯಾಗಿತ್ತು,” ಎಂದು ದಾಖಲೆ ನಿರ್ಮಿಸಿದ ಬೆನ್ನಿಗೇ ಹೇಳಿದ್ದಾರೆ. ಮುಂದಿನ ದಾಖಲೆಗಾಗಿ ಘನ ರೂಪದ ಆಹಾರ ಸೇವನೆ ಮಾಡುವುದಾಗಿ ಎರಿಕ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...