alex Certify ಲೂಧಿಯಾನ ಕೋರ್ಟ್ ಬಾಂಬ್ ಪ್ರಕರಣಕ್ಕೆ ಟ್ವಿಸ್ಟ್; ಸ್ಪೋಟಕ್ಕೆ ಬಲಿಯಾದ ವ್ಯಕ್ತಿಯೇ ಆರೋಪಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೂಧಿಯಾನ ಕೋರ್ಟ್ ಬಾಂಬ್ ಪ್ರಕರಣಕ್ಕೆ ಟ್ವಿಸ್ಟ್; ಸ್ಪೋಟಕ್ಕೆ ಬಲಿಯಾದ ವ್ಯಕ್ತಿಯೇ ಆರೋಪಿ…?

ಲೂಧಿಯಾನ ಕೋರ್ಟ್ ನಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದ್ದು, ಸದ್ಯ ಪ್ರಾಥಮಿಕ ತನಿಖೆಯಲ್ಲಿ ಕೆಲವು ಸ್ಫೋಟಕ ಮಾಹಿತಿ ಹೊರ ಬಿದ್ದಿವೆ.
ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆ ಮೃತದೇಹದ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿದೆ. ಸತ್ತ ವ್ಯಕ್ತಿ ಮಾಜಿ ಪೊಲೀಸ್ ಅಧಿಕಾರಿ ಎಂದು ಪೊಲೀಸರು ಗುರುತಿಸಿದ್ದು, ಆತನೇ ಬಾಂಬರ್ ಕೂಡ ಆಗಿದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಫೋಟಗೊಂಡಿದ್ದ ಬಾಂಬ್ ಹೆಚ್ಚಿನ ಸ್ಫೋಟಕ ಶಕ್ತಿ ಹೊಂದಿದ್ದು, ಅದನ್ನು ಜೋಡಿಸುತ್ತಿದ್ದ ಸಂದರ್ಭದಲ್ಲಿಯೇ ಅದು ಶೌಚಾಲಯದಲ್ಲಿ ಸಿಡಿದಿರಬಹುದು ಎಂಬ ಸಂಶಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗುತ್ತಿದೆ. ಸತ್ತ ವ್ಯಕ್ತಿಯ ದೇಹದಲ್ಲಿ ಆಗಿದ್ದ ಗಾಯದ ತೀವ್ರತೆ ಇದನ್ನು ಸ್ಪಷ್ಟಪಡಿಸುತ್ತಿದ್ದು, ಆತನ ದೇಹದಲ್ಲಿ ಪ್ಲಾಸ್ಟಿಕ್ ಹಾಗೂ ಅಲ್ಯೂಮಿನಿಯಂ ತುಣುಕುಗಳು ಪತ್ತೆಯಾಗಿವೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಕೇರಳ ಪೊಲೀಸರ ‘ಮಿನ್ನಲ್ ಮುರಳಿ ಸ್ಪೂಫ್’..!

ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖಲಿಸ್ತಾನ್ ಹಾಗೂ ಪಾಕ್ ನ ಸಂಘಟನೆಗಳ ಕೈವಾಡ ಇರುವ ಕುರಿತು ಕುರಿತು ತನಿಖೆಗೆ ಯಾವುದೇ ಬಲವಾದ ಕಾರಣಗಳು ಸಿಕ್ಕಿಲ್ಲ ಎನ್ನಲಾಗಿದ್ದು, ಸತ್ತ ವ್ಯಕ್ತಿಯನ್ನು ಗಗನ್ ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಹೆಡ್ ಕಾನ್ ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಸಿಲುಕಿ ಅಮಾನತುಗೊಂಡಿದ್ದ. ಆ ನಂತರ 2 ವರ್ಷಗಳ ಕಾಲ ಜೈಲಿನಲ್ಲಿದ್ದು, ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...