alex Certify ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಕೇರಳ ಪೊಲೀಸರ ‘ಮಿನ್ನಲ್ ಮುರಳಿ ಸ್ಪೂಫ್’..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಕೇರಳ ಪೊಲೀಸರ ‘ಮಿನ್ನಲ್ ಮುರಳಿ ಸ್ಪೂಫ್’..!

ಬಾಸಿಲ್ ಜೋಸೆಫ್ ಅವರ ಮಿನ್ನಲ್ ಮುರಳಿ ಸ್ಪೂಫ್ ವಿಡಿಯೋ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ. ಇದು ಕೇರಳದ ಚಲನಚಿತ್ರ ಪ್ರೇಮಿಗಳಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕೇರಳ ಪೊಲೀಸ್ ಆವೃತ್ತಿಯನ್ನು ಚಿತ್ರದಲ್ಲಿ ಹೊರತರಲಾಗಿದೆ. ಏನಾದರೂ ಕೆಟ್ಟದಾಗುತ್ತಿರುವಾಗ ಸಮಯದಲ್ಲಿ ಪೊಲೀಸ್ ಇಲಾಖೆ ಬಂದು ಕಾಪಾಡುವಂತಹ ಸನ್ನಿವೇಶಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಪ್ರತಿ ಕಷ್ಟದ ಪರಿಸ್ಥಿತಿಯಲ್ಲೂ ಸಂರಕ್ಷಕರಾಗಿ ಬರುತ್ತಾರೆ. ಪುರುಷರಿಂದ ಕಿರುಕುಳಕ್ಕೊಳಗಾದ ಮಹಿಳೆ ಹಾಗೂ ಚೆಂಡನ್ನು ಪಡೆಯಲು ಹೋಗಿ ಅಪಘಾತಕ್ಕೀಡಾಗುತ್ತಿದ್ದ ಮಗುವನ್ನು ಮಿಂಚಿನ ವೇಗದಲ್ಲಿ ರಕ್ಷಿಸುತ್ತಾರೆ. ಈ ಮೂಲಕ ಕೇರಳ ಪೊಲೀಸರು ಯಾವಾಗಲೂ ಜನಸಾಮಾನ್ಯರೊಂದಿಗೆ ಇರುತ್ತಾರೆ ಎಂಬುದನ್ನು ಈ ವಿಡಿಯೋ ಮುಖಾಂತರ ತೋರಿಸಲಾಗಿದೆ.

ಕಾಲ್ಪನಿಕ ಕಥೆಗಳ ಹೊರತಾಗಿ, ಪೊಲೀಸ್ ಇಲಾಖೆ ಪರಿಹರಿಸಿದ ಕೆಲವು ಪ್ರಮುಖ ಪ್ರಕರಣಗಳ ತುಣುಕುಗಳನ್ನು ಸಹ ತೋರಿಸಲಾಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹಿಟ್ ಆಗಿದ್ದು, 24 ಗಂಟೆಗಳೊಳಗೆ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...