alex Certify ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ರಕ್ಷಿಸಲು ಆರು ಮಹಡಿ ಏರಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ರಕ್ಷಿಸಲು ಆರು ಮಹಡಿ ಏರಿದ ವ್ಯಕ್ತಿ

ಮಧ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಕಿಟಕಿಯಿಂದ ನೇತಾಡುತ್ತಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಆರು ಮಹಡಿ ಏರಿದ ವಿಡಿಯೋ ಒಂದು ವೈರಲ್ ಆಗಿದ್ದು, ಈತನ ಸಾಹಸಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುವ ಈ ವ್ಯಕ್ತಿ ಈಗ ಹೀರೋ ಆಗಿದ್ದಾನೆ. ಮಗು ಆರು ಮಹಡಿಗಳಷ್ಟು ಮೇಲೆ ಕಿಟಕಿಯ ಗ್ರಿಲ್ಸ್ ಹಿಡಿದು ನೇತಾಡುತ್ತಿದೆ. ಕೆಳಗೆ ಬಿದ್ದರೆ ಬದುಕುವ ಆಸೆಯೇ ಇಲ್ಲ. ಆಗ ಸರಸರನೆ ಮಹಡಿಗಳನ್ನು ಏರುತ್ತ ಸಾಗಿದ ವ್ಯಕ್ತಿ ಕೊನೆಗೂ ಆ ಬಾಲಕಿಯನ್ನು ಹಿಡಿದು ರಕ್ಷಿಸಿದ. ಈ ಸಾಹಸದಲ್ಲಿ ಆತ ಯಾವುದೇ ರಕ್ಷಣಾತ್ಮಕ ಸಲಕರಣೆಗಳನ್ನು ಬಳಸದೇ ಇರುವುದು ವಿಶೇಷ.

ಆನ್ ಪೆಂಗ್ ಎಂಬ ಈ ವ್ಯಕ್ತಿ ಘಟನೆ ನಡೆಯುವ ಹೊತ್ತಿಗೆ ಕರ್ತವ್ಯನಿರತನಾಗಿರಲಿಲ್ಲ. ಆತನ ಮನೆಯ ಪಕ್ಕದಲ್ಲೇ ಈ ಘಟನೆ ನಡೆದಿತ್ತು. ಐದು ವರ್ಷದ ಮಗುವೊಂದು ಕಿಟಕಿಯಿಂದ ನೇತಾಡುತ್ತಿದೆ ಎಂದು ತಿಳಿದ ಆತ ಸ್ಥಳಕ್ಕೆ ಧಾವಿಸಿದ. ಜೀವಭಯದಿಂದ ಕೂಗುತ್ತಿದ್ದ ಮಗುವನ್ನು ರಕ್ಷಿಸಲು ಆತ ಸರಸರನೆ ಕಟ್ಟಡವನ್ನೇರಿದ. ಕೆಲವೇ ನಿಮಿಷಗಳಲ್ಲಿ ತಾಯಿಯೂ ಓಡಿ ಬಂದು, ತನ್ನ ಮಗುವನ್ನು ಕೆಳಗಿಳಿಸಿಕೊಳ್ಳುವಲ್ಲಿ ಯಶಸ್ವಿಯಾದಳು.

BIG NEWS: ʼಸ್ಕೂಲ್ ಆನ್ ವ್ಹೀಲ್ಸ್ʼ ವಿದ್ಯಾರ್ಥಿಗಳಿಗೆ ಇನ್ನು ಬಿಸಿಯೂಟ

ನೆಟ್ಟಿಗರು ಆನ್ ಪೆಂಗ್ನನ್ನು ‘ನಿಜವಾದ ಹೀರೋ ಬಾಲಕಿಯನ್ನು ರಕ್ಷಿಸಿದ್ದಾನೆ, ದೇವರು ಆತನನ್ನು ಆಶೀರ್ವದಿಸಲಿ’ ಎಂದು ಕೊಂಡಾಡಿದ್ದಾರೆ. ಗ್ರಿಲ್ ಗಳ ನಡುವೆ ಅಂತರ ಜಾಸ್ತಿ ಇದ್ದ ಕಾರಣ ಬಾಲಕಿ ಕೆಳಗೆ ಬೀಳುವ ಸಂಭವವಿತ್ತು. ಹೀಗಾಗಿ, ರಕ್ಷಣೆಗೆ ಧಾವಿಸಿದೆ ಎಂದು ಪೆಂಗ್ ತಿಳಿಸಿದ್ದಾನೆ.

ಇತ್ತೀಚೆಗೆ ಕಜಕಿಸ್ತಾನದಲ್ಲೂ ಇಂಥದೇ ಘಟನೆ ನಡೆದಿತ್ತು. 8ನೇ ಮಹಡಿಯಿಂದ ಜೋತಾಡುತ್ತಿದ್ದ ಮಗುವನ್ನು ರಕ್ಷಿಸಲು ಅಲ್ಲಿಯೂ ಒಬ್ಬ ವ್ಯಕ್ತಿ ಹೆಲ್ಮೆಟ್ ಅಥವಾ ಬೇರಾವುದೇ ರಕ್ಷಣಾ ಸಾಧನವಿಲ್ಲದೆ ಕಟ್ಟಡವೇರಿದ್ದ. ಈ ವಿಡಿಯೋ ಕೂಡ ವೈರಲ್ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...