alex Certify BIG NEWS: ʼಸ್ಕೂಲ್ ಆನ್ ವ್ಹೀಲ್ಸ್ʼ ವಿದ್ಯಾರ್ಥಿಗಳಿಗೆ ಇನ್ನು ಬಿಸಿಯೂಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಸ್ಕೂಲ್ ಆನ್ ವ್ಹೀಲ್ಸ್ʼ ವಿದ್ಯಾರ್ಥಿಗಳಿಗೆ ಇನ್ನು ಬಿಸಿಯೂಟ

ಸ್ಕೂಲ್ ಆನ್ ವ್ಹೀಲ್ಸ್ (SoW) ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿರುವ ಬಿಬಿಎಂಪಿ, ಇದಕ್ಕೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ಮುಂತಾದ ಸೌಲಭ್ಯಗಳನ್ನು ಪರಿಚಯಿಸಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯಕ ಆಯುಕ್ತ (ಶಿಕ್ಷಣ) ಉಮೇಶ್ ಬಿ.ಎಸ್. ಈ ಕುರಿತು ಮಾತನಾಡಿ, SoW ವಿದ್ಯಾರ್ಥಿಗಳಿಗೆ ನರ್ಸರಿ ಮಟ್ಟದಲ್ಲಿ ಎಲ್ಲ ಸೌಲಭ್ಯಗಳನ್ನು ಕೊಡಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

“ಶೀಘ್ರದಲ್ಲೇ ಸಮವಸ್ತ್ರಗಳನ್ನು ಒದಗಿಸಲು ನಾವು ಆರಂಭಿಸುತ್ತೇವೆ. ಆದರೆ, ಬಸ್ಸುಗಳನ್ನೇ ಬೇರೆ ಬೇರೆ ಸ್ಥಳಗಳಲ್ಲಿ ನಿಲ್ಲಿಸುವುದರಿಂದ, ಮಧ್ಯಾಹ್ನದ ಬಿಸಿಯೂಟವನ್ನು ಹೇಗೆ ಪೂರೈಸಬೇಕೆಂಬ ಕುರಿತು ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ” ಎಂದು ಉಮೇಶ್ ಹೇಳಿದರು.

ಕಳೆದ ವರ್ಷ ಆರಂಭವಾದ SoW, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ಉದ್ದೇಶ ಹೊಂದಿದೆ. ಬಿಬಿಎಂಪಿಯು ಇದಕ್ಕಾಗಿ 10 ಬಸ್ಸುಗಳನ್ನು ಮಾರ್ಪಡಿಸಿ ಶಾಲೆಯಂತಹ ಪರಿಸರವನ್ನು ಒದಗಿಸಿದೆ. ಕೋವಿಡ್-19 ಸಂದರ್ಭದಲ್ಲಿ ದಾಖಲಾತಿಯು ಸ್ಥಗಿತಗೊಂಡಿತ್ತು. ಈಗ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸ್ಥಿರತೆ ಕಂಡುಬಂದಿದೆ. ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ವಲಯಗಳಲ್ಲಿ ನಾವು ಸದ್ಯ 200ರಿಂದ 250 ಮಕ್ಕಳನ್ನು ಹೊಂದಿದ್ದೇವೆ ಎಂದು ಉಮೇಶ್ ವಿವರಿಸಿದರು.

ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸುವಂತೆ ಅಧಿಕಾರಿಗಳು ಶಿಕ್ಷಕರನ್ನು ಕೇಳಿಕೊಂಡಿದ್ದಾರೆ. “ಅಂತಿಮವಾಗಿ ವಿದ್ಯಾರ್ಥಿಗಳನ್ನು ನಿಯಮಿತವಾದ ಶಾಲೆಗಳಿಗೆ ಕಳುಹಿಸಲು ನಾವು ಉದ್ದೇಶಿಸಿದ್ದೇವೆ. ಅವರೆಲ್ಲರೂ ಅನಕ್ಷರಸ್ಥ ಕುಟುಂಬಗಳಿಂದ ಬಂದಿದ್ದಾರೆ. ಅವರ ಪಾಲಕರಲ್ಲಿ ಜಾಗೃತಿಯೂ ಇಲ್ಲ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಮಾಂಟೆಸ್ಸರಿ ಶಿಕ್ಷಣವನ್ನು ಒದಗಿಸಲು ಎರಡು ಬಸ್‌ಗಳನ್ನು ಪಾಲಿಕೆಯು ಎನ್‌ಜಿಒ ಒಂದಕ್ಕೆ ಹಸ್ತಾಂತರಿಸಿದೆ. “ಶಾಲೆಗಳನ್ನು ನಡೆಸುವಲ್ಲಿ ಅವರಿಗೆ ಉತ್ತಮ ಅನುಭವವಿದೆ. ಅವರಲ್ಲಿ ಶೈಕ್ಷಣಿಕ ಸಲಕರಣೆಗಳು ಮತ್ತು ವಿಧಾನಗಳಿವೆ,” ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಎನ್‌ಜಿಒ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಊಟ ಮತ್ತು ನಿಯಮಿತವಾದ ಆರೋಗ್ಯ ತಪಾಸಣೆಯನ್ನು ನೀಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...