alex Certify ನಟಿ ಚಿತ್ರವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಚಿತ್ರವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು….!

ದಕ್ಷಿಣ ಭಾರತದಲ್ಲಿ ಮಾಳವಿಕಾ ಮೋಹನನ್​ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಮಾಸ್ಟರ್​ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅವರ ಖ್ಯಾತಿ ಹೆಚ್ಚಿದೆ.

2016ರಲ್ಲಿ ತೆರೆಕಂಡ ಕನ್ನಡದ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ವಿಶ್ವವಿಖ್ಯಾತ ನಿರ್ದೇಶಕ ಮಜಿದ್​ ಮಜಿದಿ ನಿರ್ದೇಶನ ಮಾಡಿದ್ದ ಬಿಯಾಂಡ್​ ದಿ ಕ್ಲೌಡ್ಸ್​ ಸೀರಿಸ್​ನಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದರು ಮಾಳವಿಕ. ಇಷ್ಟೆಲ್ಲ ಜನಪ್ರಿಯತೆ ಇರುವ ನಟಿಗೆ ಈಗ ಎಡಿಟೆಡ್​ ಫೋಟೋದಿಂದ ಕಿರಿಕಿರಿ ಆಗಿದೆ.

ಹೌದು ಮಾಳವಿಕ ಮೋಹನನ್ ಅವ್ರ ಫೋಟೊವನ್ನ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ ಎಡಿಟ್ ಮಾಡಿದ್ದಾರಂತೆ.‌ ತಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದವರಿಗೆ ಮಾಳವಿಕಾ, ತಮ್ಮದೇ ದಾಟಿಯಲ್ಲಿ ಛೀಮಾರಿ ಹಾಕಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಕೋಟ್ಯಾಂತರ ರೂ. ಆಸ್ತಿಯ ಒಡತಿ ಶಿಲ್ಪಾ ಶೆಟ್ಟಿ…! ಪತ್ನಿ ಹೆಸರಿಗೆ 38.5 ಕೋಟಿ ಮೌಲ್ಯದ ಪ್ಲಾಟ್ ಗಳನ್ನ ವರ್ಗಾವಣೆ ಮಾಡಿದ ರಾಜ್ ಕುಂದ್ರಾ

ಒರಿಜಿನಲ್​ ಫೋಟೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಅವರು ತಮ್ಮ ಮಾತನ್ನು ಸಾಬೀತುಪಡಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ತೆಗೆದ ಫೋಟೋ ಇದು. ಇದನ್ನು ಬಳಸಿಕೊಂಡು ಯಾರೋ ಅಶ್ಲೀಲವಾಗಿ ಎಡಿಟ್​ ಮಾಡಿದ್ದಾರೆ. ಕೆಲವು ಮಾಧ್ಯಮಗಳೂ ಸೇರಿದಂತೆ ಅನೇಕರು ಅಶ್ಲೀಲ ಫೋಟೋವನ್ನು ವೈರಲ್​ ಮಾಡುತ್ತಿದ್ದಾರೆ. ಅದು ಸರಿಯಲ್ಲ. ನಿಮಗೆ ಫೇಕ್​ ಫೋಟೋ ಕಾಣಿಸಿದರೆ ಅದನ್ನು ರಿಪೋರ್ಟ್​ ಮಾಡಿ ಎಂದು ಮಾಳವಿಕಾ ಮೋಹನನ್​ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...