alex Certify ದಳಪತಿ ವಿಜಯ್​ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಮಹೇಶ್​ ಬಾಬು ಪುತ್ರಿ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಳಪತಿ ವಿಜಯ್​ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಮಹೇಶ್​ ಬಾಬು ಪುತ್ರಿ……?

ತಮಿಳು ಸೂಪರ್​ಸ್ಟಾರ್​ ವಿಜಯ್​​ ಬೀಸ್ಟ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್​ ಮುಂದಿನ ಸಿನಿಮಾ ದಳಪತಿ 66 ಸಿನಿಮಾವನ್ನು ನಿರ್ದೇಶಕ ಪೈದಪಲ್ಲಿ ನಿರ್ದೇಶಿಸುತ್ತಿದ್ದು ವಿವಿಧ ಕಾರಣಕ್ಕೆ ಈ ಸಿನಿಮಾ ಸುದ್ದಿಯಾಗುತ್ತಲೇ ಇದೆ. ದಳಪತಿ 66 ಏಕಕಾಲದಲ್ಲಿ ತೆಲಗು ಹಾಗೂ ತಮಿಳು ಭಾಷೆಯಲ್ಲಿ ತೆರೆ ಕಾಣಲಿದೆ. ಸದ್ಯಕ್ಕೆ ಸಿಕ್ಕಿರುವ ಇಂಟರೆಸ್ಟಿಂಗ್​ ಮಾಹಿತಿ ಏನೆಂದರೆ ದಳಪತಿ 66 ಸಿನಿಮಾದಲ್ಲಿ ವಿಜಯ್​ ಜೊತೆ ಮಹೇಶ್​ ಬಾಬು ಪುತ್ರಿ ಸಿತಾರಾ ನಟಿಸಲಿದ್ದಾರೆ ಎನ್ನಲಾಗಿದೆ.

ಧಾರಾವಾಹಿ ನೋಡಲು ಬಿಡದ ಮಗಳಿಗೆ ತಾಯಿ ಬೈದ ಪರಿ ಕಂಡು ನೆಟ್ಟಿಗರು ಫಿದಾ..!

ದಳಪತಿ 66 ಚಿತ್ರತಂಡ ಸದ್ಯ ಪ್ರಿಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿದೆ. ಬೀಸ್ಟ್​ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ವಿಜಯ್​ ದಳಪತಿ 66 ಸಿನಿಮಾ ಸೆಟ್​ಗೆ ಆಗಮಿಸ್ತಾರೆ ಎನ್ನಲಾಗಿದೆ.

ಮಹೇಶ್​ ಬಾಬು ಪುತ್ರಿ ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದರ ಹೊರತಾಗಿ ನಟ ಪ್ರಕಾಶ್​ ರಾಜ್​ ಕೂಡ ಈ ಚಿತ್ರತಂಡ ಸೇರಿಕೊಳ್ತಾರೆ ಎಂಬ ವದಂತಿ ಕೂಡ ಇದೆ. ಈ ಮೂಲಕ ಪ್ರಕಾಶ್​ ರಾಜ್​ ಹಾಗೂ ವಿಜಯ್​ 12 ವರ್ಷಗಳ ಬಳಿಕ ಈ ಸಿನಿಮಾದಲ್ಲಿ ಒಂದಾಗಲಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಕೊನೆಯ ಬಾರಿಗೆ 2009ರಲ್ಲಿ ಫ್ಲಿಕ್​ ವಿಲ್ಲು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.

ಹೊಸ ವಾಹನ ಖರೀದಿ ಮಾಡುವವರಿಗೊಂದು ಗುಡ್ ನ್ಯೂಸ್…..! ಇದ್ರಲ್ಲಿ ಸಿಗ್ತಿದೆ ಶೇ.25ರಷ್ಟು ರಿಯಾಯಿತಿ

ದಳಪತಿ 66 ಸಿನಿಮಾದ ಬಗ್ಗೆ ಕಳೆದ ತಿಂಗಳು ಘೋಷಣೆ ಮಾಡಲಾಗಿದೆ. ಅಂದಹಾಗೆ ಇದು ಈ ಸಿನಿಮಾದ ನಿಜವಾದ ಹೆಸರಲ್ಲ. ಇದು ವಿಜಯ್​ ನಟನೆಯ 66ನೇ ಸಿನಿಮಾ ಆಗಿರೋದ್ರಿಂದ ದಳಪತಿ 66 ಎಂಬ ಹೆಸರನ್ನು ತಾತ್ಕಾಲಿಕವಾಗಿ ಇಡಲಾಗಿದೆ. ಈ ಸಿನಿಮಾಗೆ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ. ಈ ಸಿನಿಮಾದ ನಾಯಕಿಯ ಪಾತ್ರಕ್ಕೆ ಕಿಯಾರಾ ಅಡ್ವಾಣಿ, ರಶ್ಮಿಕಾ ಮಂದಣ್ಣ ಹಾಗೂ ಕೀರ್ತಿ ಸುರೇಶ್​ ಹೆಸರು ಕೇಳಿ ಬರ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...