alex Certify ಧಾರಾವಾಹಿ ನೋಡಲು ಬಿಡದ ಮಗಳಿಗೆ ತಾಯಿ ಬೈದ ಪರಿ ಕಂಡು ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರಾವಾಹಿ ನೋಡಲು ಬಿಡದ ಮಗಳಿಗೆ ತಾಯಿ ಬೈದ ಪರಿ ಕಂಡು ನೆಟ್ಟಿಗರು ಫಿದಾ..!

ಬರೋಬ್ಬರಿ 35 ಸಾವಿರ ರೂಪಾಯಿ ನೀಡಿ ಬ್ರ್ಯಾಂಡೆಡ್​ ಬೆಲ್ಟ್​ ಖರೀದಿ ಮಾಡಿದ್ದ ಮಗಳಿಗೆ ತಾಯಿಯು ಬೈದಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿತ್ತು. ಅದೇ ತಾಯಿ ಮಗಳು ಇನ್ನೊಂದು ವಿಡಿಯೋ ಕಾರಣಕ್ಕೆ ವೈರಲ್​ ಆಗಿದ್ದಾರೆ.

ಆದರೆ ಈ ಬಾರಿ ಬೆಲ್ಟ್​ಗಾಗಿ ಅಲ್ಲ ಟಿವಿಯ ಕಾರಣಕ್ಕೆ ತಾಯಿ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ.
ವಿಡಿಯೋದಲ್ಲಿ ಅನಿತಾ ಗುಪ್ತಾ ಟಿವಿಯಲ್ಲಿ ಅನುಪಮಾ ಧಾರವಾಹಿ ನೋಡುವುದರಲ್ಲಿ ಬ್ಯುಸಿಯಾಗಿದ್ದರು. ಅದೇ ವೇಳೆ ಕೋಣೆಯೊಳಗೆ ಬಂದ ಪುತ್ರಿ ಚಬಿ ಅಮ್ಮಾ ಎಂದು ಕರೆದಿದ್ದಾರೆ.

SHOCKING NEWS: ಲಖಿಂಪುರ ಹಿಂಸಾಚಾರ ಪ್ರಕರಣ; ನಿಜಕ್ಕೂ ಅಂದು ನಡೆದಿದ್ದೇನು…? ಮತ್ತೊಂದು ಭಯಾನಕ ವಿಡಿಯೋ ವೈರಲ್

ಇದರಿಂದ ಕೋಪಗೊಂಡ ತಾಯಿ, ಏನಾಯ್ತು..? 2 ನಿಮಿಷ ಆರಾಮಾಗಿ ಕುಳಿತುಕೊಳ್ಳಲು ಬಿಡುವುದಿಲ್ಲವಾ..? ನಾವು ನಮ್ಮ ಧಾರವಾಹಿ ನೋಡುತ್ತಿದ್ದೇವೆ. ನಮಗೆ ಶಾಂತಿಯಿಂದ ಧಾರವಾಹಿ ನೋಡಲು ಬಿಡು ಎಂದು ಹೇಳಿದ್ದಾರೆ.

BIG BREAKING: ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಮನೆ ಮೇಲೂ IT ದಾಳಿ

ಈ ವೇಳೆ ಚಬಿ, ನನ್ನದು ಎಕ್ಸ್​ಟೆಂಶನ್​ ಕಾರ್ಡ್​ನ ಕೆಲಸ ಮುಗಿದಿದೆ. ಇದನ್ನು ಎಲ್ಲಿಡಲಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ‘ನನ್ನ ತಲೆಯ ಮೇಲೆ ಇಡು ’ ಎಂದು ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಪುತ್ರಿ ತಾಯಿಯ ಆದೇಶವನ್ನು ಪಾಲಿಸಿದ್ದಾಳೆ..! ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು ತಾಯಿಯ ಮುಗ್ಧತೆ ಮತ್ತೊಮ್ಮೆ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

https://www.instagram.com/reel/CUU7jnXl4f5/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...