alex Certify ಪ್ರಗ್ನೆನ್ಸಿ ಟರ್ಮಿನೇಷನ್ ಮಾತ್ರೆ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಗ್ನೆನ್ಸಿ ಟರ್ಮಿನೇಷನ್ ಮಾತ್ರೆ ಮಾರಾಟ: ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ನೋಟಿಸ್

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇ‌ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್‌ಗಳು ಮತ್ತು ಮಾತ್ರೆಗಳು ಮಾರಾಟಕ್ಕೆ ಲಭ್ಯವಿವೆ.

ಈ ಸಂಬಂಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ) ಗುರುವಾರ ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ನೋಟಿಸ್ ಜಾರಿ ಮಾಡಿದೆ.

ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ಪ್ರಕಾರ ಇಂತಹ ಔಷಧಿಗಳನ್ನು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವಂತಿಲ್ಲ.

BIG NEWS: ರಾಜ್ಯ ಸರ್ಕಾರದಿಂದ ಕೋವಿಡ್ ಹೊಸ ಮಾರ್ಗಸೂಚಿ ಪ್ರಕಟ; ಇಂದಿನಿಂದಲೇ ಜಾರಿಗೆ ಸೂಚನೆ

ಒಂದು ಸಣ್ಣ ಸುಳಿವಿನ ಮೇಲೆ ಎಫ್‌ಡಿಎ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್‌ಗೆ ಅಮೆಜಾನ್‌ನಲ್ಲಿ ಅರ್ಡರ್ ನೀಡಿತು. ಉತ್ತರಪ್ರದೇಶ ಮತ್ತು ಒಡಿಶಾ ಮೂಲದ ಕೆಲವು ಪೂರೈಕೆದಾರರು ಈ ಆರ್ಡರ್ ಸ್ವೀಕರಿಸಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ಇದೇ ರೀತಿಯ ಪ್ರಕರಣ ಕಂಡುಬಂದಿದೆ.

ಒಟ್ಟಾರೆಯಾಗಿ, ಇದು 34 ಇ-ಕಾಮರ್ಸ್ ಪೋರ್ಟಲ್‌ಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುತ್ತಿದೆಯೇ ಎಂದು ನೋಡಲು ಪರಿಶೀಲನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...