alex Certify ಹೋಳಿಯಲ್ಲಿ ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಳಿಯಲ್ಲಿ ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಜಯೋಗವು ಕೆಲವೊಮ್ಮೆ ಹೋಳಿ ಮತ್ತು ದೀಪಾವಳಿಯಂದು ರೂಪುಗೊಳ್ಳುತ್ತದೆ. ಅದರಂತೆ ಈ ಬಾರಿ ಹೋಳಿಯಂದು ಅತ್ಯಂತ ಮಂಗಳಕರವಾದ ರಾಜಯೋಗವು ರೂಪುಗೊಳ್ಳಲಿದೆ. ಹೋಳಿ ಮೊದಲು, ಶುಕ್ರ ಮತ್ತು ಮಂಗಳ ಗ್ರಹವು ಕುಂಭದಲ್ಲಿ ಶನಿಯೊಂದಿಗೆ ಸೇರಲಿದೆ. ಮಂಗಳ ಮತ್ತು ಶುಕ್ರ ಸಂಯೋಗದಿಂದ ಮಹಾಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಈ ಮಹಾಲಕ್ಷ್ಮಿ ರಾಜಯೋಗದಿಂದ ಸಾಕಷ್ಟು ಲಾಭವಿದೆ. ಕೆಲ ರಾಶಿಯವರಿಗೆ ಆರ್ಥಿಕ ವೃದ್ಧಿಯಾಗಲಿದೆ. ಅಚ್ಚರಿ ಎನ್ನುವಂತೆ ನಿರೀಕ್ಷೆ ಮಾಡದ ಮೂಲದಿಂದ ಹಣ ಹರಿದುಬರಲಿದೆ.

ಮಹಾಲಕ್ಷ್ಮಿ ರಾಜಯೋಗದಿಂದ ಲಾಭ ಪಡೆಯುವ ರಾಶಿಗಳು :

ತುಲಾ ರಾಶಿ : ಹೋಳಿ ಈ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿರಲಿದೆ.  ಮಹಾಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭವನ್ನು ನೀಡಲಿದೆ. ತುಲಾ ರಾಶಿಯ ಐದನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಕೆಲವು ಒಳ್ಳೆಯ ಸುದ್ದಿ ಕಿವಿಗೆ ಬೀಳಲಿದೆ. ವ್ಯಾಪಾರದಲ್ಲಿ ಭಾರೀ ಏರಿಕೆಯಾಗಲಿದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯದಲ್ಲಿ ಸುಧಾರಣೆ ಕಾಣಿಸಲಿದೆ.

ವೃಶ್ಚಿಕ ರಾಶಿ : ಹೋಳಿ ಈ ರಾಶಿಯವರಿಗೂ ಶುಭ ಫಲ ನೀಡಲಿದೆ. ಮಹಾಲಕ್ಷ್ಮಿ ರಾಜಯೋಗವು ಮಂಗಳಕರವಾಗಿರಲಿದೆ.  ಹೋಳಿಗೆ ಕೆಲವು ದಿನಗಳ ಮೊದಲು ವೃಶ್ಚಿಕ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಈ ರಾಶಿಯವರಿಗೆ ಭೌತಿಕ ಸಂತೋಷ ಪ್ರಾಪ್ತಿಯಾಗಲಿದೆ. ವಾಹನ ಮತ್ತು ಆಸ್ತಿ ಖರೀದಿಸುವ ಸಾಧ್ಯತೆ ಇದೆ.

ಕುಂಭ ರಾಶಿ : ಹೋಳಿಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗದಿಂದ ರೂಪುಗೊಂಡ ಮಹಾಲಕ್ಷ್ಮಿ ರಾಜಯೋಗವು ಕುಂಭ ರಾಶಿಯವರಿಗೆ ಸಂತೋಷ ನೀಡಲಿದೆ. ಈ ರಾಶಿಯವರ ವ್ಯಕ್ತಿತ್ವದಲ್ಲಿ ಸುಧಾರಣೆ ಆಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾಣಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...