alex Certify ‘ಮಾರೋ ಮುಜೆ ಮಾರೋ’ ವ್ಯಕ್ತಿಯ ಮತ್ತೊಂದು ವಿಡಿಯೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಾರೋ ಮುಜೆ ಮಾರೋ’ ವ್ಯಕ್ತಿಯ ಮತ್ತೊಂದು ವಿಡಿಯೋ ಫುಲ್‌ ವೈರಲ್

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಈಗಾಗಲೇ ಕೌಂಟ್‌ ಡೌನ್ ಶುರುವಾಗಿದೆ. ಈ ನಡುವೆ, ‘ಮಾರೋ ಮುಜೆ ಮಾರೋ’ ಎಂದು ಹೇಳಿ ಫೇಮಸ್ ಆಗಿದ್ದ ಮೊಮಿನ್ ಸಾಕಿಬ್, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೊದಲು ಭಾವನಾತ್ಮಕ ವಿಡಿಯೊ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.

2019 ರಲ್ಲಿ ಪಾಕಿಸ್ತಾನವು ಭಾರತದ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಮೊಮಿನ್ ಸಾಕಿಬ್ ಎಂಬಾತ ʼಮಾರೋ ಮುಜೆ ಮಾರೋʼ ಎಂದು ಆಕ್ರೋಶಭರಿತವಾಗಿ ಹೇಳಿದ್ದ. ಆ ವೇಳೆ ಈತನ ಬಗ್ಗೆ ಅಂತರ್ಜಾಲದಲ್ಲಿ ಭಾರಿ ಮೇಮ್ ಗಳು ಹರಿದಾಡಿದ್ದವು. ಇದೀಗ ಮತ್ತೊಂದು ವಿಡಿಯೋವನ್ನು ಅಪ್ಲೋಡ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಹಿಂತಿರುಗಿದ್ದಾನೆ.

ಈ ಬಾರಿ ಆತ, “ಭಾರತ ಮತ್ತು ಪಾಕಿಸ್ತಾನ ನಡುವಿನ ಉಗುರು ಕಚ್ಚುವ ಪಂದ್ಯಕ್ಕೆ ನೀವು ಸಿದ್ಧರಿದ್ದೀರಾ ? ಕೇವಲ ಎರಡು ಪಂದ್ಯಗಳಿವೆ, ಒಂದು ಭಾರತದ ವಿರುದ್ಧ ಪಾಕಿಸ್ತಾನ ಮತ್ತು ಇನ್ನೊಂದು ಲಗಾನ್ ಚಿತ್ರ” ಎಂದು ಹೇಳಿದ್ದಾನೆ.

ನಂತರ, “2019 ರ ಪಂದ್ಯ ನಿನ್ನೆ ಮಾತ್ರ ಮುಗಿದಂತೆ ಭಾಸವಾಗುತ್ತಿದೆ. ಸಮಯ ಹಾರಿಹೋಗುತ್ತದೆ” ಎಂದು ಭಾವುಕನಾಗಿ ಮಾತನಾಡಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 9,00,000 ಮಂದಿ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...