alex Certify ವರ ಹಾರ ಹಾಕುವಾಗಲೇ ಹೃದಯಸ್ತಂಭನದಿಂದ ಮೃತಪಟ್ಟ ವಧು: ಕ್ಷಣಾರ್ಧದಲ್ಲಿ ಮರೆಯಾಯ್ತು ಮದುವೆ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ ಹಾರ ಹಾಕುವಾಗಲೇ ಹೃದಯಸ್ತಂಭನದಿಂದ ಮೃತಪಟ್ಟ ವಧು: ಕ್ಷಣಾರ್ಧದಲ್ಲಿ ಮರೆಯಾಯ್ತು ಮದುವೆ ಸಂಭ್ರಮ

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ 20 ರ ಹರೆಯದ ಯುವ ವಧು ವೇದಿಕೆಯಲ್ಲಿ ಹಾರ ವಿನಿಮಯ ಸಮಾರಂಭದಲ್ಲಿ ಹೃದಯ ಸ್ತಂಭನದಿಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಶನಿವಾರ ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಿಹಾಬಾದ್ ಸ್ಟೇಷನ್ ಹೌಸ್ ಆಫೀಸರ್(ಎಸ್‌ಹೆಚ್‌ಒ) ಸುಭಾಸ್ ಚಂದ್ರ ಸರೋಜ್, ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತಮಗೆ ತಿಳಿದುಬಂದಿತು. ನಂತರ ತಂಡವನ್ನು ವಿಚಾರಣೆಗಾಗಿ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಮಾಹಿತಿ ಪ್ರಕಾರ, ಭದ್ವಾನಾ ಗ್ರಾಮದ ರಾಜ್‌ ಪಾಲ್ ಅವರ ಮಗಳು ಶಿವಂಗಿಯ ವಿವಾಹವು ವಿವೇಕ್ ಅವರೊಂದಿಗೆ ನಡೆಯುತ್ತಿತ್ತು. ವಧು ವೇದಿಕೆಯನ್ನು ತಲುಪಿ ವರನಿಗೆ ಮಾಲಾರ್ಪಣೆ ಮಾಡಿದರು. ಕೆಲವು ಸೆಕೆಂಡುಗಳ ನಂತರ, ಅವರು ವೇದಿಕೆಯ ಮೇಲೆ ಕುಸಿದು ಬಿದ್ದರು. ಕೂಡಲೇ ಶಿವಾಂಗಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಲ್ಲಿಂದ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...