alex Certify BIG NEWS: ಎಲ್.ಪಿ.ಜಿ. ಸಂಪರ್ಕ ಪಡೆಯೋದು ಇನ್ಮುಂದೆ ಮತ್ತಷ್ಟು ಸುಲಭ – ಮಿಸ್ಡ್‌ ಕಾಲ್‌ ಕೊಟ್ಟರೆ ಸಾಕು ಮನೆಗೆ ಬರುತ್ತೆ ಸಿಲಿಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್.ಪಿ.ಜಿ. ಸಂಪರ್ಕ ಪಡೆಯೋದು ಇನ್ಮುಂದೆ ಮತ್ತಷ್ಟು ಸುಲಭ – ಮಿಸ್ಡ್‌ ಕಾಲ್‌ ಕೊಟ್ಟರೆ ಸಾಕು ಮನೆಗೆ ಬರುತ್ತೆ ಸಿಲಿಂಡರ್

ಎಲ್.ಪಿ.ಜಿ. ಸಿಲಿಂಡರ್ ಪ್ರತಿಯೊಬ್ಬರ ಮನೆಗೂ ಬಂದಿದೆ. ಇನ್ನೂ ಕೆಲವರು ಎಲ್.ಪಿ.ಜಿ. ಸಿಲಿಂಡರ್ ಸಂಪರ್ಕ ಪಡೆದಿಲ್ಲ. ಎಲ್.ಪಿ.ಜಿ. ಸಿಲಿಂಡರ್ ಪಡೆಯಲು ಇನ್ಮುಂದೆ ಕಚೇರಿಗೆ ಹೋಗಬೇಕಾಗಿಲ್ಲ. ಕೇವಲ ಒಂದು ಮಿಸ್ಡ್ ಕಾಲ್ ನೀಡಿ, ಸುಲಭವಾಗಿ ಎಲ್.ಪಿ.ಜಿ. ಸಂಪರ್ಕ ಪಡೆಯಬಹುದು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈ ಬಗ್ಗೆ ಟ್ವೀಟ್ ಮಾಡಿದೆ. 8454955555 ನಂಬರ್ ಗೆ ಮಿಸ್ಡ್ ಕಾಲ್ ಮಾಡಬೇಕು. ನಂತ್ರ ಕಂಪನಿ ನಿಮ್ಮನ್ನು ಸಂಪರ್ಕಿಸುತ್ತದೆ. ವಿಳಾಸ ಪುರಾವೆ ಮತ್ತು ಆಧಾರನ್ನು ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ.

ಈ ಸಂಖ್ಯೆಯ ಮೂಲಕ ಎಲ್.ಪಿ.ಜಿ. ರೀಫಿಲ್ಲಿಂಗ್ ಕೂಡ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಬೇಕು. ಕುಟುಂಬದ ಯಾವುದೇ ವ್ಯಕ್ತಿ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಇದ್ದು, ಅವರ ವಿಳಾಸವನ್ನು ಪುರಾವೆಯಾಗಿ ನೀಡಿ, ನೀವು ನಿಮ್ಮ ಹೊಸ ವಿಳಾಸಕ್ಕೆ, ಹೊಸ ಗ್ಯಾಸ್ ಸಂಪರ್ಕ ಪಡೆಯಬಹುದು.

ಮಿಸ್ಡ್ ಕಾಲ್ ಮೂಲಕ, ಗ್ಯಾಸ್ ಸಂಪರ್ಕವನ್ನು ದೇಶದ ಯಾವುದೇ ಮೂಲೆಯಲ್ಲಿ ವಾಸಿಸುವ ಗ್ರಾಹಕರು ಪಡೆಯಬಹುದು.

ಇಂಡಿಯನ್ ಆಯಿಲ್ ಆಪ್ ಅಥವಾ https://cx.indianoil.in  ಮೂಲಕ ಕೂಡ ಗ್ಯಾಸ್ ಬುಕಿಂಗ್ ಮಾಡಬಹುದು. ಗ್ರಾಹಕರು 7588888824 ಗೆ ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ಸಿಲಿಂಡರ್‌ ತುಂಬಿಸಬಹುದು. 7718955555 ನಂಬರ್ ಗೆ ಎಸ್ಎಂಎಸ್ ಅಥವಾ ಐವಿಆರ್ಎಸ್ ಮಾಡುವ ಮೂಲಕವೂ ಬುಕಿಂಗ್ ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...