alex Certify Bengaluru : ಬಿಟ್ಟೋದ ಹುಡ್ಗಿ ಜೊತೆ ಮದ್ವೆ ಮಾಡ್ಸಿ ಎಂದು ಪೊಲೀಸರ ಬೆನ್ನುಬಿದ್ದ ‘ಪಾಗಲ್ ಪ್ರೇಮಿ..ಆಮೇಲೆ ಏನಾಯ್ತು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Bengaluru : ಬಿಟ್ಟೋದ ಹುಡ್ಗಿ ಜೊತೆ ಮದ್ವೆ ಮಾಡ್ಸಿ ಎಂದು ಪೊಲೀಸರ ಬೆನ್ನುಬಿದ್ದ ‘ಪಾಗಲ್ ಪ್ರೇಮಿ..ಆಮೇಲೆ ಏನಾಯ್ತು..?

ಬೆಂಗಳೂರಿನ ಪೊಲೀಸರಿಗೆ ಲವರ್ ಬಾಯ್ ಕಾಟ : ಬಿಟ್ಟೋದ ಹುಡ್ಗಿ ಜೊತೆ ಮದ್ವೆ ಮಾಡ್ಸಿ ಎಂದು ಪಾಗಲ್ ಪ್ರೇಮಿ ಹಬೆಂಗಳೂರು : ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ ವರದಿಯಾಗಿದ್ದು, ಬಿಟ್ಟೋದ ಹುಡುಗಿ ಜೊತೆ ಮದ್ವೆ ಮಾಡ್ಸಿ ಎಂದು ‘ಪಾಗಲ್ ಪ್ರೇಮಿ’ ಯೊಬ್ಬ ಪೊಲೀಸರ ಬೆನ್ನುಬಿದ್ದ ಘಟನೆ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಣಿಕಂಠ ಎಂಬಾತನೇ ಪೊಲೀಸರಿಗೆ ಕಾಟ ಕೊಟ್ಟ ವಿಚಿತ್ರ ಪ್ರೇಮಿ. ತಿಲಕ್ ನಗರ ಪೊಲೀಸ್ ಠಾಣೆಗೆ ಪ್ರತಿನಿತ್ಯ ಹೋಗಿ ಈತ ನನ್ನ ಹುಡುಗಿ ನನ್ನನ್ನು ಬಿಟ್ಟು ಹೋಗಿದ್ದಾಳೆ, ಆಕೆಯ ಜೊತೆ ಮದುವೆ ಮಾಡಿಸಿ ಎಂದು ಪೊಲೀಸರಿಗೆ ಗೋಗರೆಯುತ್ತಿದ್ದಾನೆ ಎಂದು ಹೇಳಲಾಗಿದೆ.

ಮೊದಲು ಪ್ರೀತಿ ಪ್ರೇಮ ಅಂತ ಇಬ್ಬರು ಸುತ್ತಾಡಿದೆವು, ಆದರೆ ಈಗ ಜಾತಿ ಅಡ್ಡಿಯಾಗಿದೆಯೆಂದು ನನ್ನನ್ನು ಬಿಟ್ಟು ಹೋಗಿದ್ದಾಳೆ. ಪ್ಲೀಸ್ ಸರ್ ನನ್ನ ಪ್ರಿಯತಮೆ ಜೊತೆ ಮದುವೆ ಮಾಡಿಸಿ ಎಂದು ಯುವಕ ಗೋಳಿಟ್ಟಿದ್ದಾನೆ. ಯುವತಿ ಜೊತೆ ಮಾಡಿದ ಮೆಸೇಜ್ ಚಾಟಿಂಗ್ ಪ್ರಿಂಟ್ ತೆಗೆದು ಅದನ್ನು ಹಿಡಿದು ದಿನ ಪ್ರತಿ ಠಾಣೆಗೆ ಅಲೆದಾಡುತ್ತಿದ್ದಾನೆ. ಯುವತಿ ಮನೆಯವರ ಜೊತೆ ಮಾತನಾಡಿ ಮದುವೆ ಮಾಡಿಸಿ ಎಂದು ಪೊಲೀಸ್ ಸ್ಟೇಷನ್ ಗೆ ದಿನನಿತ್ಯ ಅಲೆದಾಡುತ್ತಿದ್ದಾನೆ.

ಕೊನೆಗೆ ತಿಲಕ್ ನಗರ ಪೊಲೀಸರು, ಪಾಗಲ್ ಪ್ರೇಮಿ ದೂರನ್ನು ಸ್ವೀಕರಿಸಿ ಯುವತಿ ಮನೆಯವರನ್ನು ಸಂಪರ್ಕ ಮಾಡಿ ಯುವತಿಯ ಅಭಿಪ್ರಾಯ ಪಡೆದಿದ್ದಾರೆ. ಆಗ ಯುವತಿಗೆ ಇಷ್ಟ ಇಲ್ಲವೆಂದರೂ ಮಣಿಕಂಠ ಆಕೆಯ ಹಿಂದೆ ಬಿದ್ದಿರುವುದು ಗೊತ್ತಾಗಿದೆ. ನಂತರ ಪೊಲೀಸರು ಕೋರ್ಟ್ ನಲ್ಲಿ ಈ ಬಗ್ಗೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...