alex Certify ಪುಟ್ಟ ಪೋರನ ತುಂಟಾಟಕ್ಕೆ ಪೌರಕಾರ್ಮಿಕ ಸುಸ್ತೋ ಸುಸ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪೋರನ ತುಂಟಾಟಕ್ಕೆ ಪೌರಕಾರ್ಮಿಕ ಸುಸ್ತೋ ಸುಸ್ತು….!

ಮಕ್ಕಳಿದ್ದಲ್ಲಿ ಆಟ, ತುಂಟಾಟಗಳು ಇರೋದು ಕಾಮನ್. ಸೋಶಿಯಲ್ ಮೀಡಿಯಾದಲ್ಲಿ ಅಂತಹ ನೂರಾರು ವಿಡಿಯೋಗಳು ಆಗಾಗ ನೋಡಲು ಸಿಗ್ತಾನೇ ಇರುತ್ತೆ. ಇತ್ತೀಚೆಗೆ ಇನ್ನೊಂದು ವಿಡಿಯೋ ಸೊಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅದೇ ನೋಡಿ ಈ ವಿಡಿಯೋ.

ಪುಟ್ಟ ಪೋರ ಒಬ್ಬ ಗಾರ್ಬೆಜ್ ಕವರ್‌‌ ಒಳಗೆ ಮುಚ್ಚಿಟ್ಟುಕೊಂಡಿರುತ್ತಾನೆ. ಅದೇ ಸಮಯಕ್ಕೆ ಎಂದಿನಂತೆ ಪೌರಕಾರ್ಮಿಕ ಕಸದ ಚೀಲ ತೆಗೆದುಕೊಳ್ಳೊದಕ್ಕೆ ಬರುತ್ತಾನೆ. ಅಲ್ಲಿದ್ದ ಮೂರು ಚೀಲಗಳಲ್ಲಿ ಒಂದೊಂದೇ ಚೀಲ ಪಕ್ಕದಲ್ಲಿದ್ದ ಲಾರಿಯ ಒಳಗೆ ಹಾಕುತ್ತಾನೆ.

ಎರಡು ಚೀಲ ಹಾಕಿದ ನಂತರ ಮೂರನೇಯದು ಎತ್ತಿ ಬಿಸಾಕುವಷ್ಟರಲ್ಲಿ ಆ ಚೀಲದೊಳಗೆ ಇರೋ ಬಾಲಕ ಜೋರಾಗಿ ನಗ್ತಾ ನಗ್ತಾ ಕೂಗುತ್ತಾನೆ. ಆ ಪೌರ ಕಾರ್ಮಿಕ ಅಲ್ಲಿ ಆ ಹುಡುಗ ಇರಬಹುದು ಅನ್ನೊ ಅಂದಾಜೇ ಇಲ್ಲದೇ ಫುಲ್ ಶಾಕ್ ಆಗುತ್ತಾನೆ.

ಆತ ಬೆಚ್ಚಿಬೀಳುವುದನ್ನ ಬಾಲಕ ಸಖತ್ ಎಂಜಾಯ್ ಮಾಡುತ್ತಾನೆ. ಅದನ್ನ ಅಲ್ಲೇ ಪಕ್ಕದಲ್ಲಿ ಇರುವ ಈ ಬಾಲಕನ ಸಹೋದರ ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಇಂತಹ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. ಕೆಲವು ಬಾರಿ ಮಕ್ಕಳ ತುಂಟಾಟಗಳು ದೊಡ್ಡವರ ಜೀವಕ್ಕೆ ಕಂಟಕ ತಂದಿಟ್ಟಿದ್ದು ಉಂಟು. ಯಾವುದಕ್ಕೂ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...