alex Certify ನಾಯಿಯ ಬಿಪಿ ಚೆಕ್​ ಮಾಡಿದ ಬಾಲಕ: ಕ್ಯೂಟ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯ ಬಿಪಿ ಚೆಕ್​ ಮಾಡಿದ ಬಾಲಕ: ಕ್ಯೂಟ್‌ ವಿಡಿಯೋ ವೈರಲ್

ಮಕ್ಕಳು ಸ್ಟೆಥಸ್ಕೋಪ್​ ತೆಗೆದುಕೊಂಡೋ ಇಲ್ಲವೇ ಆಟಿಕೆಯಿಂದ ಮನುಷ್ಯರ ಬಿಪಿ ಚೆಕ್​ ಮಾಡುವುದು, ಹೃದಯದ ಬಡಿತ ನೋಡುವುದು ಎಲ್ಲವೂ ಮಾಮೂಲು. ಆದರೆ ಆಟವಾಡಲು ಯಾರೂ ಇಲ್ಲದಿದ್ದರೆ ಹಲವು ಮಕ್ಕಳಿಗೆ ಪ್ರಾಣಿಗಳೇ ಸ್ನೇಹಿತರು.

ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ನಾಯಿಗೆ ಹುಡುಗನೊಬ್ಬ ಬಿಪಿ ಚೆಕ್​ ಮಾಡುತ್ತಿದ್ದಾನೆ. ಪಶು ವೈದ್ಯನಾಗುವ ತನ್ನ ಕನಸನ್ನು ಈ ರೀತಿ ಈಡೇರಿಸಿಕೊಳ್ಳುತ್ತಿದ್ದಾನೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಆದರೆ ಈ ನಾಯಿ ಕೂಡ ಬಾಲಕನ ಜೊತೆ ಸುಮ್ಮನೆ ಕುಳಿತಿದ್ದು, ಆತ ಹೇಳಿದಂತೆ ಕೇಳುತ್ತಿದೆ. ಇದಕ್ಕಾಗಿ ಇದು ಕ್ಯೂಟ್​ ವಿಡಿಯೋ ಎನಿಸಿಕೊಂಡಿದೆ. ಬಾಲಕ ಎಳೆಯುತ್ತಿದ್ದರೂ ನಾಯಿ ಸುಮ್ಮನೇ ಕುಳಿತು ಆತ ಹೇಳುವಂತೆ ಕೇಳುತ್ತಿದೆ. ತನ್ನ ಕಾಲನ್ನು ಬಾಲಕನಿಗೆ ನೀಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಯಾವ ಜನ್ಮದ ಬಂಧವೋ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

https://twitter.com/buitengebieden/status/1650731577553321984?ref_src=twsrc%5Etfw%7Ctwcamp%5Etweetembed%7Ctwterm%5E1650731577553321984%7Ctwgr%5E7ec9a9d7647a10de7b87283a861791d17b3aafce%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boy-turns-doctor-for-his-furry-friend-in-adorable-video-watch-2364477-2023-04-25

https://twitter.com/jeffbtmnews/status/1650768333380243456?ref_src=twsrc%5Etfw%7Ctwcamp%5Etweetembed%7Ctwterm%5E1650768333380243456%7Ctwgr%5E7ec9a9d7647a10de7b87283a861791d17b3aafce%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boy-turns-doctor-for-his-furry-friend-in-adorable-video-watch-2364477-2023-04-25

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...