alex Certify Video | ಪುಟ್ಟ ಬಾಲಕನಿಗೆ ಕ್ಲಾಸ್​ ರೂಮಿನಲ್ಲಿ ಬರ್ತಡೇ ಸಪ್ರೈಸ್; ಭಾವುಕನಾದ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಪುಟ್ಟ ಬಾಲಕನಿಗೆ ಕ್ಲಾಸ್​ ರೂಮಿನಲ್ಲಿ ಬರ್ತಡೇ ಸಪ್ರೈಸ್; ಭಾವುಕನಾದ ಪೋರ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದೆ Twitter) ನಲ್ಲಿ ಚಿಕ್ಕ ಹುಡುಗನೊಬ್ಬನ ಮೊದಲ ಹುಟ್ಟುಹಬ್ಬದ ಆಚರಣೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕರುಣೆ, ಸ್ನೇಹ ಮತ್ತು ಭಾವನಾತ್ಮಕ ಕ್ಷಣವೊಂದನ್ನು ಸೆರೆಹಿಡಿದಿದೆ.

ಹೃದಯತುಂಬಿ ಬರುವ ಈ ವಿಡಿಯೋದಲ್ಲಿ ಆ ಹುಡುಗ ತನ್ನ ಜೀವನದಲ್ಲಿ ಮೊದಲ ಬಾರಿಗೆ ಅಷ್ಟೊಂದು ಸಪ್ರೈಸ್ ಆಗಿರುವ ಕ್ಷಣವನ್ನು ತೋರಿಸುತ್ತದೆ. ಈ ಕ್ಷಣ ಆ ಹುಡುಗನ ಜೀವನದಲ್ಲಿ ಶಾಶ್ವತವಾಗಿ ನೆನಪಿನಲ್ಲಿರುವಂತಿದೆ.

ಹಿಂದೆಂದೂ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಳ್ಳದ ಆ ಪುಟ್ಟ ಬಾಲಕನಿಗೆ ಅದು ಮರೆಯಲಾಗದ ಸಮಾರಂಭವಾಯಿತು. ಆ ಹುಡುಗನ ಶಿಕ್ಷಕರು ಮತ್ತು ಸಹಪಾಠಿಗಳ ಈ ಯೋಜನೆ, ಯೋಚನೆಗೆ ನೆಟ್ಟಿಗರು ಧನ್ಯವಾದವನ್ನು ತಿಳಿಸಿದ್ದಾರೆ. ಅವನ ಆ ಜನ್ಮದಿನವು ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಮೆಮೊರೇಬಲ್ ಸಂದರ್ಭವಾಯಿತು.

ವೀಡಿಯೊದಲ್ಲಿ, ಹುಡುಗ ಕ್ಲಾಸ್ ರೂಂಗೆ ಎಂಟ್ರಿ ಆದ ಕೂಡಲೇ ಸಹಪಾಠಿಗಳು ಅವನ ಸುತ್ತಲೂ ಒಟ್ಟು ಸೇರುತ್ತಾರೆ. “ಜನ್ಮದಿನದ ಶುಭಾಶಯಗಳು” ಎಂಬ ಫೇಮಸ್ ಆಗಿರುವ ಹಾಡನ್ನು ಜೋರಾಗಿ ಹಾಡುತ್ತಾರೆ. ಈ ಹಾಡನ್ನು ಹಾಡುವ ಸಂದರ್ಭದಲ್ಲಿ ಸಹಪಾಠಿಗಳ ಮುಖ ಉತ್ಸಾಹದಿಂದ ಹೊಳೆಯುತ್ತವೆ. ಮತ್ತು ಅವರು ಸಹ ಅವನ ಸಂತೋಷದಲ್ಲಿ ಜೊತೆಯಾಗುತ್ತಾರೆ. ಬರ್ತ್‌ಡೇ ಸಾಂಗ್ ಹಾಡಿದ ಬಳಿಕ, ಸಹಪಾಠಿಗಳು ಹುಡುಗನನ್ನು ಹಗ್ ಮಾಡಿ ಆತ್ಮೀಯವಾಗಿ ಹುಟ್ಟಹಬ್ಬದ ಶುಭಾಶಯಗಳನ್ನು ಕೋರುತ್ತಾರೆ. ಈ ವೀಡಿಯೊ 2.8 ಮಿಲಿಯನ್ ವ್ಯೂವ್ಸ್ ಆಗಿದೆ.

— Tansu YEĞEN (@TansuYegen) September 15, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...