alex Certify ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್

ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್‌ ತನ್ನ ಸೀಮಿತ ಎಡಿಶನ್‌ನ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಬೈಕ್‌ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ.

ಟ್ವಿಟರ್‌ನಲ್ಲಿ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಟಿವಿಎಸ್ ಈ ವಿಚಾರ ಘೋಷಿಸಿದೆ. “ಸೀಮಿತ ಎಡಿಶನ್‌ನ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಅದಾಗಲೇ ಸೋಲ್ಡ್ ಔಟ್ ಆಗಿದೆ. ಪ್ರತಿಯೊಬ್ಬ ಅಪಾಚೆಯನ್‌ಗೂ ಈ ರೇಸ್ ಮಷಿನ್‌ ಮೇಲೆ ಆಸಕ್ತಿ ಇಟ್ಟಿದ್ದಕ್ಕೆ ಧನ್ಯವಾದ ತಿಳಿಸುತ್ತೇವೆ – ಮತ್ತು ಮಿಸ್ ಮಾಡಿಕೊಂಡವರಿಗೆ, ಆರ್‌ಪಿ ಸರಣಿ ಭವಿಷ್ಯದಲ್ಲಿ ಹೊಸ ರೇಸ್ ಮಷಿನ್‌ನೊಂದಿಗೆ ಮರಳಲಿದೆ,” ಎಂದು ಟಿವಿಎಸ್ ಅಪಾಚೆ ಸೀರೀಸ್ ಹೇಳಿಕೊಂಡಿದೆ.

ಶೀಘ್ರವೇ ಈ ಐದು ಬೈಕ್‌ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ

ರೇಸ್ ಪರ್ಫಾರ್ಮೆನ್ಸ್‌ ಸರಣಿಯಡಿ ಬಿಡುಗಡೆ ಮಾಡಲಾದ ಮೊದಲ ಬೈಕ್ ಆಗಿರುವ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165ಆರ್‌ಪಿಯ 200 ಘಟಕಗಳನ್ನು ಮಾತ್ರವೇ ಲಾಂಚ್‌ ಮಾಡಲಾಗಿತ್ತು. ಈ ಬೈಕ್‌ನ ಎಕ್ಸ್‌ಶೋರೂಂ ಬೆಲೆ 1.45 ಲಕ್ಷ ರೂ.ಗಳು.

ಬೈಕ್‌ನಲ್ಲಿರುವ 165 ಸಿಸಿ ಇಂಜಿನ್‌ನಲ್ಲಿ 19.2 ಪಿಎಸ್‌ ಶಕ್ತಿ 10,000 ಆರ್‌ಪಿಎಂನಲ್ಲಿ ಉತ್ಪಾದನೆಯಾಗುತ್ತದೆ. ಅಪಾಚೆ ಆರ್‌ಟಿಆರ್‌ನ ಬಿಎಸ್‌6 ಮಾಡೆಲ್‌ಗಳಿಗೆ ಆರ್‌ಟಿ-ಎಫ್‌ಐ ತಂತ್ರಜ್ಞಾನದ ಬಲ ನೀಡಲಾಗಿದೆ. ಈ ಮಾಡೆಲ್‌ಗಳಲ್ಲಿ ಕಾರ್ಬೂರೇಟರ್‌ನಿಂದ ಇಂಧನದ ಇಂಜೆಕ್ಷನ್‌ವರೆಗೂ ಮಾರ್ಪಾಡು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...