alex Certify LIC ಪ್ರೀಮಿಯಂ ಪಾವತಿ ಇನ್ನು ಬಲು ಸುಲಭ; ಇಲ್ಲಿದೆ ಅದರ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LIC ಪ್ರೀಮಿಯಂ ಪಾವತಿ ಇನ್ನು ಬಲು ಸುಲಭ; ಇಲ್ಲಿದೆ ಅದರ ಸಂಪೂರ್ಣ ವಿವರ

ಇನ್ಮೇಲೆ ಎಲ್‌ಐಸಿಯಲ್ಲಿ ಕೂಡ ಪಾಲಿಸಿದಾರರು ಯುಪಿಐ ಮೂಲಕ ತಮ್ಮ ವಿಮಾ ಪಾಲಿಸಿಯ ಪ್ರೀಮಿಯಂಗಳನ್ನು ಪಾವತಿಸಬಹುದು. ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ, ಇತ್ತೀಚೆಗಷ್ಟೆ ಈ ಸೌಲಭ್ಯವನ್ನು ಒದಗಿಸಿಕೊಟ್ಟಿದೆ.

ಇದಕ್ಕೂ ಮೊದಲು ಪಾಲಿಸಿದಾರರು ಆನ್‌ಲೈನ್ ಬ್ಯಾಂಕಿಂಗ್ ಮತ್ತು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಕಂತಿನ ಹಣವನ್ನು ಪಾವತಿಸಬಹುದಿತ್ತು. ಆದ್ರೆ ಈಗ ಪ್ರೀಮಿಯಂಗಳನ್ನು ಪಾವತಿಸಲು Google Pay ಅಥವಾ Paytm ನಂತಹ ಜನಪ್ರಿಯ UPI ಪ್ಲಾಟ್‌ಫಾರ್ಮ್‌ಗಳನ್ನು ಬಳಸಬಹುದು.

Google Pay ಅಪ್ಲಿಕೇಶನ್‌ನಲ್ಲಿ UPI ಮೂಲಕ LIC ಪ್ರೀಮಿಯಂ ಪಾವತಿಸುವುದು ಹೇಗೆ….?

ಹಂತ 1: Google Pay ಆ್ಯಪ್‌ನಲ್ಲಿ ಬಿಲ್ ಪಾವತಿ ವಿಭಾಗವನ್ನು ಓಪನ್‌ ಮಾಡಿಕೊಳ್ಳಿ.

ಹಂತ 2: ನಂತರ ಫೈನಾನ್ಸ್‌ & ಟ್ಯಾಕ್ಸಸ್‌ ಸೆಕ್ಷನ್‌ನಲ್ಲಿ ವಿಮೆಯನ್ನು ಆಯ್ದುಕೊಳ್ಳಿ.

ಹಂತ 3: ಲಭ್ಯವಿರುವ ಆಯ್ಕೆಗಳಲ್ಲಿ LIC ಮೇಲೆ ಕ್ಲಿಕ್‌ ಮಾಡಿ.

ಹಂತ 4: ಬಳಿಕ ನಿಮ್ಮ LIC ಪಾಲಿಸಿಯನ್ನು ಪ್ಲಾಟ್‌ಫಾರ್ಮ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಖಾತೆಯನ್ನು ಲಿಂಕ್ ಮಾಡಲು ನಿಮ್ಮ ಪಾಲಿಸಿ ಸಂಖ್ಯೆ, ಇಮೇಲ್ ಐಡಿ ಮತ್ತು ಇತರ ವಿವರಗಳನ್ನು ನಮೂದಿಸಿ. ಸಲ್ಲಿಸುವ ಮೊದಲು ವಿವರಗಳನ್ನು ಎರಡು ಬಾರಿ ಪರಿಶೀಲಿಸಿ.

ಹಂತ 5: ಖಾತೆಯನ್ನು ಲಿಂಕ್ ಮಾಡಿದ ನಂತರ ನಿಮ್ಮ LIC ಪಾಲಿಸಿಯ ಕಂತನ್ನು ಪಾವತಿಸಲು ನಿಮಗೆ ಸಾಧ್ಯವಾಗುತ್ತದೆ.

Paytm ಅಪ್ಲಿಕೇಶನ್‌ನಲ್ಲಿ UPI ಮೂಲಕ LIC ಪ್ರೀಮಿಯಂ ಪಾವತಿಸುವುದು ಹೇಗೆ ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Paytm ಅಪ್ಲಿಕೇಶನ್‌ ಓಪನ್‌ ಮಾಡಿ.

ಹಂತ 2: ‘ರೀಚಾರ್ಜ್ ಮತ್ತು ಬಿಲ್ ಪೇಮೆಂಟ್‌ ‘ ವಿಭಾಗವನ್ನು ಆಯ್ದುಕೊಳ್ಳಿ.

ಹಂತ 3: ನಂತರ ‘ವ್ಯೂ ಮೋರ್‌’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4: ಅದಾದ ಬಳಿಕ ‘ಫೈನಾನ್ಷಿಯಲ್‌ ಸರ್ವಿಸಸ್‌ʼ ಸೆಕ್ಷನ್‌ಗೆ ವಿಸಿಟ್‌ ಮಾಡಬೇಕು.

ಹಂತ 5: ಆ್ಯಪ್‌ನಲ್ಲಿ LIC/Insurance ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 6: ಈ ಹಂತದಲ್ಲಿ LIC ಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 7: ‘ಪೇ ಇನ್ಶುರೆನ್ಸ್ ಪ್ರೀಮಿಯಂ’ ಎಂಬ ಆಪ್ಷನ್‌ ನಿಮಗೆ ಕಾಣಿಸುತ್ತದೆ.

ಹಂತ 8: ಅಲ್ಲಿ ನಿಮ್ಮ LIC ಪಾಲಿಸಿ ವಿವರಗಳನ್ನು ನಮೂದಿಸಬೇಕು.

ಹಂತ 9: ಒಮ್ಮೆ ಪಾಲಿಸಿಯನ್ನು ಯಶಸ್ವಿಯಾಗಿ ಲಿಂಕ್ ಮಾಡಿದ ನಂತರ, Paytm ಅಪ್ಲಿಕೇಶನ್‌ನಲ್ಲಿ ನಿಮ್ಮ LIC ಪ್ರೀಮಿಯಂಗಳಿಗೆ ಪಾವತಿಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...