alex Certify ಮನೆಯಲ್ಲಿ ʼಸುಖ ಶಾಂತಿʼ ನೆಲೆಸಲು ಹೀಗಿರಲಿ ಶಿವರಾತ್ರಿ ಪೂಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ʼಸುಖ ಶಾಂತಿʼ ನೆಲೆಸಲು ಹೀಗಿರಲಿ ಶಿವರಾತ್ರಿ ಪೂಜೆ

ತ್ರಿಮೂರ್ತಿಗಳಲ್ಲಿ ಭಗವಾನ್​ ಶಿವ ಕೂಡ ಒಬ್ಬ. ಶಿವನನ್ನ ಒಲಿಸಿಕೊಳ್ಳಬೇಕು ಅಂದರೆ ದೊಡ್ಡ ದೊಡ್ಡ ಹೋಮ – ಹವನದ ಅವಶ್ಯಕತೆ ಇಲ್ಲ. ಭಕ್ತನ ನಿಷ್ಠೆ, ಶ್ರದ್ಧಗೆ ಒಲಿಯುವ ಭಗವಂತ ಅಂದರೆ ಅದು ಬೋಲೇನಾಥ. ಇನ್ನೇನು ಕೆಲವೇ ದಿನಗಳಲ್ಲಿ ಶಿವರಾತ್ರಿ ಹಬ್ಬ ಕೂಡ ಇದೆ. ಧರ್ಮದ ಪ್ರಕಾರ ಫಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಶಿವ – ಪಾರ್ವತಿಯರ ವಿವಾಹವಾಗಿತ್ತಂತೆ. ಈ ದಿನವನ್ನ ಶಿವರಾತ್ರಿ ಎಂದು ಕರೆಯಲಾಗುತ್ತೆ.

ಮನೆಯಲ್ಲಿ ವಾಸ್ತುದೋಷದ ಸಮಸ್ಯೆ ಇದ್ದರೆ ಕಳಸದಲ್ಲಿ ನೀರನ್ನ ತುಂಬಿಕೊಂಡು ಅದರಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಕಳಸದಲ್ಲಿ ನೀರನ್ನ ತುಂಬಿ ಓಂ ನಮಃ ಶಿವಾಯ ಕರಾಲಂ ಮಹಾಕಾಲ ಕಾಂ ಕೃಪಾಲಂ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಜಪಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶ ದೂರಾಗಲಿದೆ.

ಮಹಾಶಿವರಾತ್ರಿಯ ಶುಭ ದಿನದಂದು ಕೆಂಪು ಬಣ್ಣದ ವಸ್ತ್ರವನ್ನ ಧರಿಸಿ ಶಿವನ ದೇವಾಲಯಕ್ಕೆ ಹೋಗಿ. ಶಿವ ಹಾಗೂ ಪಾರ್ವತಿ ದೇವಿಗೆ ಪೂಜೆ ಮಾಡಿ. ಶಿವನ ಪೂಜೆಯ ಜೊತೆಯಲ್ಲಿ ಪಾರ್ವತಿ ದೇವಿಗೆ ಬಾಗಿನ ಅರ್ಪಿಸೋದನ್ನ ಮರೆಯದಿರಿ. ಇದರಿಂದ ವೈವಾಹಿಕ ಜೀವನ ಸುಖವಾಗಿ ಇರಲಿದೆ. ಹಾಗೂ ವೈವಾಹಿಕ ಜೀವನದಲ್ಲಿರುವ ಅಶಾಂತಿ ದೂರಾಗಲಿದೆ.

ಕಚೇರಿ ಕೆಲಸಗಳಲ್ಲಿ ತೊಂದರೆ ಅಥವಾ ಮನೆಯ ಸದಸ್ಯರಾದಾರೂ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ ರುದ್ರಾಭಿಷೇಕ ಮಾಡಿ. ಇದರ ಜೊತೆಯಲ್ಲಿ ಮನೆಯ ಪೂರ್ವ ಇಲ್ಲವೇ ವಾಯುವ್ಯ ದಿಕ್ಕಿನಲ್ಲಿ ಬಿಲ್ವ ಪತ್ರೆಯ ಗಿಡವನ್ನ ಬೆಳೆಸಿ. ಈ ಗಿಡಕ್ಕೆ ಬೆಳಗ್ಗೆ ಜಲಾಭಿಷೇಕ ಮಾಡಿ ಹಾಗೂ ಸಂಜೆ ವೇಳೆ ತುಪ್ಪದ ದೀಪವನ್ನ ಹಚ್ಚಿ ಧ್ಯಾನ ಮಾಡಿ.

ಮನೆಯ ಉತ್ತರ ದಿಕ್ಕಿನಲ್ಲಿ ಶಿವನ ಪರಿವಾರದ ಫೋಟೋವನ್ನ ಹಾಕಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚಾಗಲಿದೆ. ಮನೆಯ ಸದಸ್ಯರು ಒಗ್ಗಟ್ಟಿನಿಂದ ಇರಲಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಮನೆಯಲ್ಲಿ ವೈವಾಹಿಕ ಜೀವನ ಸುಖಮಯವಾಗಿ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...