alex Certify ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು

ಶಾಲೆಗೆ ಹೋಗುವ ಮಕ್ಕಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಯೇ ಸರಿ. ಚಿಕ್ಕವರಿಗೇನು ಪದವಿ ಪಡೆಯುತ್ತಿರುವ ಮಕ್ಕಳು ಕೂಡ ಕೆಲವೊಮ್ಮೆ ಗಣಿತ ಅಂದ್ರೆ ಬೆವರುತ್ತಾರೆ. ಗಣಿತ ಎಂದರೆ ಮಕ್ಕಳಿಗೆ ಏರಲಾಗದ ಪರ್ವತವೇ ಆಗಿದೆ. ಅಂತಹ ಪರ್ವತವನ್ನು ಸಲೀಸಾಗಿ ಏರುವ ಮಾರ್ಗ ಇಲ್ಲಿದೆ.

ಕೆಲವರಿಗೆ 17ರ ಮಗ್ಗಿ ಸಲೀಸಾದರೆ ಇನ್ನು ಕೆಲವರಿಗೆ ಅದನ್ನು ಬಾಯಿಪಾಠ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಾಗುತ್ತದೆ. ಕೆಲವರಂತೂ ಈ ಮಗ್ಗಿ ನೆನಪಿಟ್ಟುಕೊಳ್ಳಲು ಏನಾದರೂ ಟ್ರಿಕ್ ಇದೆಯಾ ಎಂಬ ಹುಡುಕಾಟದಲ್ಲೇ ಇರುತ್ತಾರೆ. ಇಂತವರಿಗೆಂದೇ ಸೋಷಿಯಲ್ ಮೀಡಿಯಾಗಳಲ್ಲಿ ಅನೇಕ ಮ್ಯಾಥ್ ಟೇಬಲ್ ಗಳು ಸಿಗುತ್ತಿವೆ. ಎರಡು ಅಂಕಿಯ ಅತಿದೊಡ್ಡ ಸಂಖ್ಯೆಯಾದ 99ರ ಮಗ್ಗಿಯ ಕೋಷ್ಠಕವನ್ನು ಸಲೀಸಾಗಿ ಹೇಗೆ ಕಲಿಯಬಹುದು ಎಂಬುದು ಇಲ್ಲಿದೆ.

99ರ ಮಗ್ಗಿಯನ್ನು ಬರೆಯಲು ಮೊದಲು ನೀವು 99×1 ರಿಂದ 99×10ರ ತನಕ ಬರೆದುಕೊಳ್ಳಬೇಕು. ನಂತರ ಅದರ ಮುಂದೆ 0 ದಿಂದ 9ರ ತನಕ ಕ್ರಮಬದ್ಧವಾಗಿ 99×10ರ ತನಕ ಬರೆಯಬೇಕು. ಇದಾದ ನಂತರ ಎಲ್ಲ ಅಂಕೆಗಳ ಮುಂದೆ 9 ಅನ್ನು ಸೇರಿಸಿ. ಕೊನೆಯಲ್ಲಿ ಇಳಿಕೆ ಕ್ರಮದಲ್ಲಿ 9ರಿಂದ 0ತನಕ ಬರೆಯಿರಿ. ಹೀಗೆ ಮಾಡಿದರೆ ನಿಮ್ಮ 99ರ ಮಗ್ಗಿ ಕೋಷ್ಠಕ ತಯಾರಾಗುತ್ತದೆ.

ಉದಾ:

1 ನೇ ಸ್ಟೆಪ್

99 × 1 = 0

99 × 2 = 1

99 × 3 = 2

99 × 4 = 3

99 × 5 = 4

99 × 6 = 5

99 × 7 = 6

99 × 8 = 7

99 × 9 = 8

99 × 10 = 9

2 ನೇ ಸ್ಟೆಪ್

99 × 1 = 09

99 × 2 = 19

99 × 3 = 29

99 × 4 = 39

99 × 5 = 49

99 × 6 = 59

99 × 7 = 69

99 × 8 = 79

99 × 9 = 89

99 × 10 = 99

3 ನೇ ಸ್ಟೆಪ್

99 × 1 = 099

99 × 2 = 198

99 × 3 = 297

99 × 4 = 396

99 × 5 = 495

99 × 6 = 594

99 × 7 = 693

99 × 8 = 792

99 × 9 = 891

99 × 10 = 990

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...