alex Certify Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು

ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ ಸರೋವರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಿಮದ ದಪ್ಪ ಹೊದಿಕೆಯಲ್ಲಿ ಮುಚ್ಚಿಹೋಗಿದ್ದವು. ಈ ಕಾರುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಎಸ್‌ಯುವಿಯೊಂದು ತನ್ನ ಸುತ್ತಲೂ ಹಿಮದಿಂದ ಮುಚ್ಚಿಹೋಗಿರುವ ಹಿಮದಿಂದಾಗಿ ಬೇರೆಯದ್ಧೇ ವಸ್ತುವಿನ ಹಾಗೆ ಗೋಚರಿಸುತ್ತಿರುವುದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಕ್ಯಾಮೆರಾವನ್ನು ಮತ್ತೊಂದು ಬದಿಗೆ ಪ್ಯಾನ್ ಮಾಡಿದ ಬಳಿಕ ಹಿಮಾವೃತವಾಗಿರುವ ಎಸ್‌ಯುವಿ ಸುತ್ತಲೂ ನೀರು ಭೋರ್ಗರೆದು ಬರುತ್ತಿರುವುದನ್ನು ನೋಡಬಹುದಾಗಿದೆ.

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಆ ಕಾರಿನ ಚಾಲಕ ಸರೋವರದ ಬದಿಯಲ್ಲಿ ಪಾರ್ಕ್ ಮಾಡಿ, ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ಕೆರೆಯಿಂದ ಚಿಮ್ಮುತ್ತಿದ್ದ ನೀರಿನಿಂದ ಆ ಕಾರು ಹೀಗೆ ಆಗಿರುವುದನ್ನು ಕಂಡಿದ್ದಾನೆ.

ನ್ಯೂಯಾರ್ಕ್‌ನ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದ್ದಲ್ಲದೇ, ಗಂಟೆಗೆ 47 ಮೈಲಿ ವೇಗದಲ್ಲಿ ಬೀಸಿದ ಜೋರಾದ ಗಾಳಿಯಿಂದಾಗಿ ಹೀಗೆ ಸರೋವರದಿಂದ ಭಾರೀ ಪ್ರಮಾಣದಲ್ಲಿ ನೀರು ಕಾರಿನ ಮೇಲೆ ಚಿಮ್ಮಿದ್ದು, ಅದು ಶೀತಮಯ ವಾತಾವರಣದಿಂದ ಹೀಗೆ ಹೆಪ್ಪುಗಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...