alex Certify ಶುಲ್ಕ ಭರಿಸಲು ಬೀದಿಯಲ್ಲಿಯೇ ಯುವಕನ ಸಂಗೀತ…! ಕಲಾವಿದನ ಪ್ರತಿಭೆಗೆ ಬೆರಗಾದ ಖ್ಯಾತ ನಟರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಲ್ಕ ಭರಿಸಲು ಬೀದಿಯಲ್ಲಿಯೇ ಯುವಕನ ಸಂಗೀತ…! ಕಲಾವಿದನ ಪ್ರತಿಭೆಗೆ ಬೆರಗಾದ ಖ್ಯಾತ ನಟರು

ವ್ಯಕ್ತಿಯೊಬ್ಬನ ಸುಮಧುರವಾದ ಕಂಠಕ್ಕೆ ಜನರು ಮನಸೋತಿದ್ದಾರೆ. ಆತ ವೇದಿಕೆಯಲ್ಲೋ ಅಥವಾ ಪ್ರಶಸ್ತಿ ಸಮಾರಂಭದಲ್ಲೋ ಪ್ರದರ್ಶನ ನೀಡಿದ್ದಲ್ಲ. ಬೀದಿಯ ಬದಿಯಲ್ಲಿ ನೀಡಿದ ಆತನ ಪ್ರದರ್ಶನಕ್ಕೆ ಸುತ್ತಲೂ ಜನಸಂದಣಿ ಸೇರಿತ್ತು.

ಹೌದು, ತನ್ನ ಸಂಗೀತ ಶಾಲೆಯ ಶುಲ್ಕವನ್ನು ಪಾವತಿಸಲು ಬೀದಿಯಲ್ಲಿ ‘ಜಬ್ ಕೋಯಿ ಬಾತ್’ ಹಾಡಿದ್ದು, ಬಾಲಿವುಡ್ ನಟರಿಂದ ಪ್ರಶಂಸೆ ಗಳಿಸಿದ್ದಾನೆ. 1990 ರ ʼಜುರ್ಮ್ʼ ಚಲನಚಿತ್ರದಿಂದ ‘ಜಬ್ ಕೋಯಿ ಬಾತ್ ಬಿಗದ್ ಜಾಯೆ’ ಹಾಡನ್ನು ಜನರಿಗೆ ಮನಮುಟ್ಟುವಂತೆ ಹಾಡಿದ್ದಾನೆ.

ಉದ್ಯೋಗದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಗುಡ್ ನ್ಯೂಸ್: 45 ಸಾವಿರ ಫ್ರೆಷರ್ ಗಳ ನೇಮಕಾತಿಗೆ ಮುಂದಾದ ಇನ್ಫೋಸಿಸ್

ಈತ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 51,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಹೃತಿಕ್ ರೋಷನ್ ಮತ್ತು ಕುಣಾಲ್ ಕಪೂರ್ ಕೂಡ ಗಾಯಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಾಯಕ ಸುಮಧುರವಾಗಿ ಹಾಡುತ್ತಿದ್ದರೆ, ಕೆಳಗೆ ಸೂಚನಾ ಫಲಕ ಇಡಲಾಗಿದೆ. ಅದರಲ್ಲಿ ಕೆಲವು ನೋಟುಗಳನ್ನು ಜೋಡಿಸಲಾಗಿದೆ. “ನಿಮ್ಮ ಕೊಡುಗೆಗಾಗಿ ಧನ್ಯವಾದಗಳು, ಇದು ನನ್ನ ಸಂಗೀತ ಶಾಲೆಯ ಶುಲ್ಕವನ್ನು ಪಾವತಿಸುತ್ತದೆ” ಎಂದು ಅದರಲ್ಲಿ ಬರೆಯಲಾಗಿದೆ. ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡ ಬಳಿಕ ಭಾರಿ ವೈರಲ್ ಆಗಿದೆ.

ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ ಹಳೆ ಫೋಟೋಗಳ ಮೆಲುಕು ಹಾಕಿದ ನಟ ಮಹೇಶ್ ಬಾಬು

ಇನ್ನು ಗಾಯಕನನ್ನು ಬೆಂಬಲಿಸುವಂತೆ ಕುಣಾಲ್ ಕಪೂರ್ ನೆಟ್ಟಿಗರಿಗೆ ಮನವಿ ಮಾಡಿದ್ದಾರೆ.  “ಅದ್ಭುತ !ನೀವು ಎಲ್ಲಿದ್ದರೂ ಈ ಪ್ರತಿಭಾವಂತ ಮತ್ತು ನವೀನ ಸಂಗೀತಗಾರನನ್ನು ನೀವು ಬೆಂಬಲಿಸಿ. ಯುಪಿಐ ಮತ್ತು ತಂತ್ರಜ್ಞಾನದ ಶಕ್ತಿ” ಎಂದು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಕೂಡ ಈತನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

— Ankit.Today (@ankitv) October 9, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...