alex Certify ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ ಹಳೆ ಫೋಟೋಗಳ ಮೆಲುಕು ಹಾಕಿದ ನಟ ಮಹೇಶ್ ಬಾಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ ಹಳೆ ಫೋಟೋಗಳ ಮೆಲುಕು ಹಾಕಿದ ನಟ ಮಹೇಶ್ ಬಾಬು

ತೆಲುಗು ಚಿತ್ರರಂಗದ ನಟ ಮಹೇಶ್ ಬಾಬು ಸಹೋದರ ರಮೇಶ್ ಅವರಿಗೆ ಜನ್ಮದಿನದಂದು ಹಳೆ ಫೋಟೋಗಳನ್ನು ಮೆಲುಕು ಹಾಕುವುದರ ಮುಖಾಂತರ ಶುಭಾಶಯ ಕೋರಿದ್ದಾರೆ.

ನಟ ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು ಅವರಿಗೆ 56 ವರ್ಷಗಳು ತುಂಬಿವೆ. ಈ ಶುಭ ದಿನದಂದು ಮಹೇಶ್ ಬಾಬು, ಅವರ ಹಿರಿಯ ಸಹೋದರ ರಮೇಶ್ ಬಾಬು ಮತ್ತು ಅವರ ತಂದೆ, ಹಿರಿಯ ನಟ-ನಿರ್ದೇಶಕ ಘಟ್ಟಮನೇನಿ ಶಿವ ರಾಮ ಕೃಷ್ಣ ಅವರನ್ನು ಒಳಗೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇನ್ನೊಂದು ಚಿತ್ರದಲ್ಲಿ ಮಹೇಶ್ ಬಾಬು ತನ್ನ ಸಹೋದರ ಮತ್ತು ತಂದೆಯ ಮಧ್ಯದಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. “ನನ್ನ ಅತಿದೊಡ್ಡ ಪ್ರಭಾವಗಳಲ್ಲಿ ಒಬ್ಬ. ಅವನು ನಾನು ಯಾವಾಗಲೂ ಹುಡುಕುತ್ತಿದ್ದ ವ್ಯಕ್ತಿ. ನನ್ನ ಅಣ್ಣಯ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲೂ ಆರೋಗ್ಯ ಹಾಗೂ ಸಂತೋಷದಿಂದಿರು” ಎಂದು ಮಹೇಶ್ ಬಾಬು ಶೀರ್ಷಿಕೆಯಲ್ಲಿ  ಬರೆದಿದ್ದಾರೆ.

ಮಹೇಶ್ ಬಾಬು ಅವರ ಪತ್ನಿ, ನಟಿ ನಮ್ರತಾ ಶಿರೋಡ್ಕರ್ ಕೂಡ ರಮೇಶ್ ಬಾಬು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. “ಬಲವಾದ, ಸ್ಪೂರ್ತಿದಾಯಕ ಮತ್ತು ಸಹಾನುಭೂತಿಯುಳ್ಳ ನಮ್ಮ ಪ್ರೀತಿಯ ಅಣ್ಣಯ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು. ಚೆನ್ನಾಗಿರಿ” ಎಂದು ಬರೆದಿದ್ದಾರೆ.

ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ಕುಟುಂಬದ, ಸ್ನೇಹಿತರ ಜೊತೆಗಿರುವ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು, ನಟ ತನ್ನ ಮಗಳು ಸಿತಾರಾಳ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದರು.

https://www.instagram.com/p/CTbaZ92P7bu/?utm_source=ig_embed&ig_rid=acf5397f-b66c-4753-8ba4-9efb3ec49c86

https://www.instagram.com/p/CU4VdDWPl-8/?utm_source=ig_embed&ig_rid=7817a7f0-7b88-4a91-b1cf-eab4a8cd32e1

https://www.instagram.com/p/CTOYkTBvOZw/?utm_source=ig_embed&ig_rid=4e1f7f5d-df1b-49f2-b6da-f7f7d8f3472f

https://www.instagram.com/p/CN32sKpnKCh/?utm_source=ig_embed&ig_rid=fd8e7f89-ada1-46bd-8002-e8ff443bb36c

https://www.instagram.com/p/CQVCYadnsP3/?utm_source=ig_embed&ig_rid=3032e922-7ddf-43f7-8b3f-e7252e8f9d19

https://www.instagram.com/p/CS4ejVOq-ZH/?utm_source=ig_embed&ig_rid=0976901e-54eb-4291-9f33-34a22e753e2a

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...