alex Certify ಬಿಜೆಪಿ ಸೇರುವಾಗ ಹೆಚ್​. ವಿಶ್ವನಾಥ್​​​ಗೆ​ ಬಿಎಸ್​ವೈ ವಯಸ್ಸು ಗೊತ್ತಿರಲಿಲ್ಲವೇ..? ಹೆಚ್​.ಡಿ.ಕೆ. ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸೇರುವಾಗ ಹೆಚ್​. ವಿಶ್ವನಾಥ್​​​ಗೆ​ ಬಿಎಸ್​ವೈ ವಯಸ್ಸು ಗೊತ್ತಿರಲಿಲ್ಲವೇ..? ಹೆಚ್​.ಡಿ.ಕೆ. ವ್ಯಂಗ್ಯ

ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಕೆ.ಆರ್.​ ಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡುತ್ತಿವೆ. ಬಿಜೆಪಿ ವರಿಷ್ಠರು ಉಸ್ತುವಾರಿಯನ್ನ ನೇಮಿಸಿರೋದು ಸಮಸ್ಯೆ ನಿವಾರಣೆಗೆ ಅಲ್ಲ. ಅರುಣ್​ ಸಿಂಗ್​ಗೂ ಈ ಸಮಸ್ಯೆ ಬಗೆಹರಿಯೋದು ಬೇಕಾಗಿಯೂ ಇಲ್ಲ. ಈ ಎಲ್ಲದರ ಬಗ್ಗೆ ರಾಜ್ಯದ ಜನತೆ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದ್ರು.

ಇದೇ ವೇಳೆ ಬಿಎಸ್​ವೈ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಹೆಚ್​. ವಿಶ್ವನಾಥ್​ ವಿರುದ್ಧವೂ ಮಾತನಾಡಿದ ಹೆಚ್​ಡಿಕೆ, ಜೆಡಿಎಸ್​ ಪಕ್ಷಕ್ಕೆ ವಿಶ್ವನಾಥ್​ ಕುಟುಂಬ ರಾಜಕಾರಣ ಎಂದು ಕರೆದರು. ಜೆಡಿಎಸ್​ ಪಕ್ಷ ಸೇರುವ ಮುನ್ನ ಅವರಿಗೆ ಈ ವಿಚಾರ ಗೊತ್ತಿರಲಿಲ್ವಾ..? ವಿಶ್ವನಾಥ್​ ಪುತ್ರ ಕೂಡ ಜಿಲ್ಲಾ ಪಂಚಾಯತ್​ ಸದಸ್ಯ. ಅವರ ಕುಟುಂಬವೂ ರಾಜಕಾರಣದಲ್ಲಿ ಸಕ್ರಿಯವಾಗಿದೆ. ಹಾಗಾದರೆ ಅವರದ್ದು ಕುಟುಂಬ ರಾಜಕಾರಣ ಅಲ್ಲವಾ..? ಬಿ.ಎಸ್.​ ಯಡಿಯೂರಪ್ಪಗೆ ವಯಸ್ಸಾಯ್ತು ಅಂತಾ ಹೇಳುತ್ತಾರೆ. ಬಿಜೆಪಿ ಸೇರುವ ಮುನ್ನ ಬಿಎಸ್​ವೈ ವಯಸ್ಸು ವಿಶ್ವನಾಥ್​ಗೆ ತಿಳಿದಿರಲಿಲ್ಲವಾ..? ಅಧಿಕಾರ ಸಿಗದೇ ಇದ್ದಾಗ ಬೈಕೊಂಡು ಓಡಾಡೋದು ವಿಶ್ವನಾಥ್​ರ ಬುದ್ಧಿ ಎಂದು ಕಿಡಿಕಾರಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...