alex Certify SHOCKING NEWS: ಪ್ರಯಾಣಿಕನನ್ನು ಒದ್ದು ಬಸ್ ನಿಂದ ಹೊರತಳ್ಳಿದ KSRTC ಬಸ್ ಕಂಡಕ್ಟರ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಪ್ರಯಾಣಿಕನನ್ನು ಒದ್ದು ಬಸ್ ನಿಂದ ಹೊರತಳ್ಳಿದ KSRTC ಬಸ್ ಕಂಡಕ್ಟರ್; ವಿಡಿಯೋ ವೈರಲ್

ಮಂಗಳೂರು: ಕುಡಿದು ಬಸ್ ಹತ್ತಿದ್ದ ಪ್ರಯಾಣಿಕನೊಬ್ಬನನ್ನು ಕಂಡಕ್ಟರ್ ಥಳಿಸಿ ಕಾಲಿನಿಂದ ಒದ್ದು ಬಸ್ ನಿಂದ ಕೆಳಗಿಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಕುಡಿದು ಕೆ ಎಸ್ ಆರ್ ಟಿ ಸಿ ಬಸ್ ಹತ್ತಿದ್ದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಸ್ ನಿರ್ವಾಹಕ ಬಳಿಕ ಕಾಲಿನಿಂದ ಒದ್ದು ಬಸ್ ನಿಂದ ಹೊರದಬ್ಬಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಯಾಣಿಕ ಕುಡಿದು ಬಂದು ಬಸ್ ಹತ್ತುತ್ತಿದ್ದಾಗಲೇ ನಿರ್ವಾಹಕ ತಡೆದಿದ್ದಾನೆ. ಬಸ್ ನಿಂದ ಇಳಿಯುವಂತೆ ಹೇಳಿದ್ದಾರೆ. ಆದರೆ ಬಸ್ ಇಳಿಯದೇ ಪ್ರಯಾಣಿಕ ಗಲಾಟೆ ಮಾಡಿದ್ದಾನೆ. ಕುಡಿದು ಬಂದು ಬಸ್ ನಲ್ಲಿ ಗಲಾಟೆ ಮಾಡುತ್ತಿರುವುದೂ ಅಲ್ಲದೇ ಬಸ್ ಇಳಿಯದೆ ತೊಂದರೆ ಮಾಡುತ್ತಿದ್ದಾನೆ ಎಂದು ಕುಡುಕ ಪ್ರಯಾಣಿಕನಿಗೆ ಕಪಾಳಕ್ಕೆ ಬಾರಿಸಿ ಕೆಳಗೆ ತಳ್ಳಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು ಬಸ್ ನಿಂದ ಹೊರದಬ್ಬಿದ್ದಾರೆ. ಕುಡುಕ ಪ್ರಯಾಣಿಕ ಬಸ್ ನಿಂದ ರಸ್ತೆಗೆ ಬಿದ್ದಿದ್ದಾನೆ. ರಸ್ತೆ ಮಧ್ಯೆಯೇ ಆತನನ್ನು ಬಿಟ್ಟು ಬಸ್ ಮುಂದೆ ಸಾಗಿದೆ. ಕಂಡಕ್ಟರ್ ನ ಅಮಾನವೀಯ ವರ್ತನೆ, ದರ್ಪಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://images.tv9kannada.com/wp-content/uploads/2022/09/WhatsApp-Video-2022-09-08-at-09.13.18.mp4?_=1

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...