alex Certify ಕೊರಿಯನ್ ಕಂಟೆಂಟ್ ಕ್ರಿಯೇಟರ್ ಗೆ ಭಾರತೀಯ ಯುವಕನಿಂದ ಲೈಂಗಿಕ ಕಿರುಕುಳ; ಶಾಕಿಂಗ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರಿಯನ್ ಕಂಟೆಂಟ್ ಕ್ರಿಯೇಟರ್ ಗೆ ಭಾರತೀಯ ಯುವಕನಿಂದ ಲೈಂಗಿಕ ಕಿರುಕುಳ; ಶಾಕಿಂಗ್ ವಿಡಿಯೋ ವೈರಲ್

ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಗಳ ಸಂಖ್ಯೆ ಹೆಚ್ಚುತ್ತಿದೆ. ವಿಡಿಯೋಗಾಗಿ ಅವರು ದೇಶ ಮಾತ್ರವಲ್ಲದೆ ಹೊರದೇಶಗಳಿಗೂ ಪ್ರಯಾಣಿಸಿ ತಮ್ಮ ಫಾಲೋವರ್ಸ್ ಗೆ ಮಾಹಿತಿ ನೀಡುತ್ತಾರೆ. ಆದರೆ, ಕೆಲವೊಮ್ಮೆ ಅವರಿಗೆ ಅಪಾಯ ಎದುರಾಗುವ ಪ್ರಸಂಗವೂ ನಡೆಯುತ್ತದೆ.

ಇದೀಗ ಕಂಟೆಂಟ್ ಕ್ರಿಯೇಟರ್ಸ್ ಗಳ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸುವ  ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಕೊರಿಯಾದ ಐಆರ್‌ಎಲ್ ಸ್ಟ್ರೀಮರ್‌ಗೆ ಸಂಬಂಧಿಸಿದ ಇತ್ತೀಚಿನ ಘಟನೆಯು ಹಾಂಕಾಂಗ್‌ನ ಬೀದಿಗಳಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಯುವತಿ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಘಟನೆ ನಡೆದಿದೆ. ಈ ದೃಶ್ಯ ಸಂಪೂರ್ಣ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಂಟೆಂಟ್ ಕ್ರಿಯೇಟರ್, ಮೂಲತಃ ದಕ್ಷಿಣ ಕೊರಿಯಾದಿಂದ ಬಂದ ಯುವತಿಯೊಬ್ಬಳು ಹಾಂಕಾಂಗ್‌ನಲ್ಲಿ ತನ್ನ ದಿನದ ಪ್ರವಾಸವನ್ನು ಪ್ರಸಾರ ಮಾಡುತ್ತಿದ್ದರು. ಅವಳು ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಮೆಟ್ರೋ ನಿಲ್ದಾಣದ ಬಳಿ ಭಾರತೀಯ ವ್ಯಕ್ತಿಯನ್ನು ನೋಡಿದ್ಲು. ಆರೋಪಿಯು ಆಕೆಯ ಗಮ್ಯಸ್ಥಾನಕ್ಕೆ ಯಾವ ರೈಲು ಮಾರ್ಗವನ್ನು ಹತ್ತಬೇಕು ಎಂದು ಹೇಳುತ್ತಾ ನಿರ್ಜನ ಸ್ಥಳದತ್ತ ಹಿಂಬಾಲಿಸಿದ್ದಾನೆ. ಅವಳು ತನ್ನ ರಕ್ಷಣೆಗಾಗಿ ದೂರ ಹೋಗಲು ಪ್ರಯತ್ನಿಸಿದ್ದಾಳೆ.

ಆದರೆ, ಆ ವ್ಯಕ್ತಿ ಇದ್ದಕ್ಕಿದ್ದಂತೆ ಹತ್ತಿರ ಬಂದು ಅವಳ ಕೈಯನ್ನು ಹಿಡಿದಿದ್ದಾನೆ. ನಂತರ ಅವನು ತನ್ನೊಂದಿಗೆ ಬರುವಂತೆ ಹೇಳಿದ್ದಾನೆ. ಆಕೆ ಪದೇ ಪದೇ ಅವನೊಂದಿಗೆ ಮಾತನಾಡಲು ನಿರಾಕರಿಸಿದ್ಲು. ಅವನ ಹಿಡಿತವನ್ನು ಬಿಟ್ಟು ಓಡಿಹೋಗಲು ಪ್ರಯತ್ನಿಸಿದ್ದಾಳೆ.

ಆರೋಪಿಯು ಅವಳನ್ನು ಗೋಡೆಗೆ ಬಿಗಿದು ದುಷ್ಕೃತ್ಯ ಎಸಗಲು ಮುಂದಾದ. ದಯವಿಟ್ಟು ಕಾಪಾಡಿ ಎಂದು ಆಕೆ ಕಿರುಚಿಕೊಂಡಿದ್ದಾಳೆ. ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಲೈವ್ ಸಮಯದಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲಾಗಿದೆ. ಅದೃಷ್ಟವಶಾತ್ ಘಟನಾ ಸ್ಥಳದ ಸಮೀಪದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಅಲಾರಾಂ ಬಾರಿಸಿದ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಆರೋಪಿಯನ್ನು ಅಮಿತ್ ಎಂದು ಗುರುತಿಸಲಾಗಿದೆ. ಬಳಕೆದಾರರು ಆರೋಪಿಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಆರೋಪಿಯು ರಾಜಸ್ಥಾನ ರೈಫಲ್ಸ್ ಇಂಡಿಯನ್ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ. ಆದರೆ, ಕಿರುಕುಳ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ.

— pagliacci the hater 🎃 (@Slatzism) September 11, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...