alex Certify ಮದುಮಗನ ಹಣೆಗೆ ಸಿಂಧೂರ ತಿಲಕವಿಟ್ಟ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಗನ ಹಣೆಗೆ ಸಿಂಧೂರ ತಿಲಕವಿಟ್ಟ ವಧು….!

ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ವಿವಾಹ ಸಮಾರಂಭವೊಂದರಲ್ಲಿ, ಮದುಮಗಳು ತನ್ನ ಭಾವಿ ಪತಿಯ ಹಣೆಗೆ ಸಿಂಧೂರವಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾಲಿನಿ ಸೆನ್ ಹೆಸರಿನ ಮದುಮಗಳು ತನ್ನ ಪತಿ ಅಂಕಣ್ ಮಜುಂದಾರ್‌ ಹಣೆಗೆ ಹೀಗೆ ಸಿಂಧೂರವಿಟ್ಟಿದ್ದಾರೆ.

ಶಾಲಿನಿ ಹಾಗೂ ಅಂಕಣ್‌ ಡಿಸೆಂಬರ್‌ 2ರಂದು ಮದುವೆಯಾಗಿದ್ದಾರೆ. ಈ ಮದುವೆಯ ಶಾಸ್ತ್ರಗಳ ಫೋಟೋಗಳು ಹಾಗೂ ವಿಡಿಯೋಗಳು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿ ಅವೀಗ ವೈರಲ್ ಆಗಿವೆ.

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ: ವರ್ಗಾವಣೆಯಾದ ಶಿಕ್ಷಕನಿಗೆ ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ಸಹೋದ್ಯೋಗಿಗಳು

ಮೂವರು ಅರ್ಚಕರಿಂದ ಮಂತ್ರ ಪಠಿಸಲ್ಪಟ್ಟ ಈ ಮದುವೆಯಲ್ಲಿ ಹಸನ್ಮುಖಿ ಮದುಮಗಳು ತನ್ನ ಪತಿಯ ಹಣೆಯ ಮೇಲೆ ಸಿಂಧೂರ ತಿಲಕವಿಡುತ್ತಿರುವಂತೆಯೇ ಅತಿಥಿಗಳು ಇಬ್ಬರಿಗೂ ಚಿಯರ್‌ ಮಾಡುವುದನ್ನು 11-ಸೆಕೆಂಡ್‌ಗಳ ವಿಡಿಯೋದಲ್ಲಿ ನೋಡಬಹುದಾಗಿದೆ. ಮದುವೆಯ ಮಂತ್ರಗಳನ್ನು ಸಂಸ್ಕೃತದಲ್ಲಿ ಮಾತ್ರವಲ್ಲದೇ ಬೆಂಗಾಲಿಯಲ್ಲೂ ಪಠಿಸಲಾಯಿತು.

ಮದುವೆ ಸಮಾರಂಭದಲ್ಲಿ ಕನ್ಯಾದಾನ ಸಂಪ್ರದಾಯವನ್ನು ಕೈ ಬಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...