alex Certify ಪೊಲಾರ್ಡ್ ವಿಕೆಟ್ ಸಂಭ್ರಮಿಸಿದ ಕೊಹ್ಲಿ-ರೋಹಿತ್ ಶರ್ಮಾ; ಎಲ್ಲಿದೆ ಬಿರುಕು ಎಂದು ಪ್ರಶ್ನಿಸಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲಾರ್ಡ್ ವಿಕೆಟ್ ಸಂಭ್ರಮಿಸಿದ ಕೊಹ್ಲಿ-ರೋಹಿತ್ ಶರ್ಮಾ; ಎಲ್ಲಿದೆ ಬಿರುಕು ಎಂದು ಪ್ರಶ್ನಿಸಿದ ಅಭಿಮಾನಿಗಳು

 

ಅಹ್ಮದಾಬಾದ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಟೀಮ್ ಇಂಡಿಯಾದ ಹೊಸ ನಾಯಕನ ಹೊಸ ಯೋಜನೆಗೆ ತಬ್ಬಿಬ್ಬಾದ ಪ್ರವಾಸಿಗರು ಬ್ಯಾಟಿಂಗ್- ಬೌಲಂಗ್ ಎರಡರಲ್ಲೂ ನೀರಸ ಪ್ರದರ್ಶನ ತೋರಿದರು. 6 ವಿಕೆಟ್​ಗಳ ಭರ್ಜರಿ ಜಯ ಕಾಣುವ ಮೂಲಕ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನು ಮುನ್ನಡೆಸಿದರೆ, ವಿರಾಟ್ ಕೊಹ್ಲಿ ರೋಹಿತ್ ನಾಯಕತ್ವದಡಿಯಲ್ಲಿ ಮೊದಲ ಪಂದ್ಯವನ್ನು ಆಡಿದರು. ಇದಕ್ಕಾಗಿಯೇ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಯಾಕೆಂದರೆ ಕೊಹ್ಲಿ – ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ನಡೆದ ಆ ಒಂದು ಘಟನೆ ಈ ರೀತಿ ಅಂದುಕೊಳ್ಳುತ್ತಿದ್ದವರಿಗೆ ಶಾಕ್ ನೀಡಿತು.

ODI Ranking : ಕುಸಿದ ಟೀಂ ಇಂಡಿಯಾ

ಈ ಘಟನೆಗೆ ಕಾರಣವಾಗಿದ್ದು 20ನೇ ಓವರ್​ನಲ್ಲಿ ಯುಜ್ವೇಂದ್ರ ಚಹಲ್ ಕಿತ್ತ ವಿಕೆಟ್. ತಮ್ಮ ಮೊದಲ ಓವರ್​ನ ಮೂರನೇ ಎಸೆತದಲ್ಲೇ ಚಹಲ್ ನಿಕೋಲಸ್ ಪೂರನ್ ​ರನ್ನು ಎಲ್​ಬಿಡಬ್ಲ್ಯೂ ಮಾಡಿ ಪೆವಿಲಿಯನ್​​ಗೆ ಅಟ್ಟಿದರು. ಇದರ ಮುಂದಿನ ಎಸೆತದಲ್ಲೇ ವಿಂಡೀಸ್ ನಾಯಕ ಪ್ರಮುಖ ವಿಕೆಟ್ ಕೀರೊನ್ ಪೊಲಾರ್ಡ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಎರಡು ಎಸೆತದಲ್ಲಿ 2 ವಿಕೆಟ್ ಪಡೆದುಕೊಂಡ ಭಾರತ ಖುಷಿಯಲ್ಲಿ ತೇಲಾಡಿತು. ಅದರಲ್ಲೂ ಕೊಹ್ಲಿ ಹಾಗೂ ರೋಹಿತ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಜಿಗಿದುಕೊಂಡು ಕೈ-ಕೈ ತಾಗಿಸಿ ನಗುತ್ತಾ ಖುಷಿಯಲ್ಲಿ ಸಂಭ್ರಮಿಸಿದರು.

ರೋಹಿತ್- ಕೊಹ್ಲಿ ಅವರ ಈ ಸಂಭ್ರಮವನ್ನು ಕಂಡು ಅನೇಕರು ಇದು ಈ ಪಂದ್ಯದ ಸ್ಮರಣೀಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇನ್ನೂ ಕೆಲವರು ಕೊಹ್ಲಿ-ರೋಹಿತ್ ನಡುವೆ ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...