alex Certify ಕಂದನ ಜೀವ ತೆಗೆದ ತಾಯಿ: ಬ್ಲೇಡ್ ನಿಂದ ಶಿಶು ಕೊಂದು ಆತ್ಮಹತ್ಯೆ ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದನ ಜೀವ ತೆಗೆದ ತಾಯಿ: ಬ್ಲೇಡ್ ನಿಂದ ಶಿಶು ಕೊಂದು ಆತ್ಮಹತ್ಯೆ ಯತ್ನ

ತುಮಕೂರು: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡ್ ನಿಂದ ಕೊಯ್ದು ಕೊಲೆ ಮಾಡಿದ್ದಾಳೆ. ನಂತರ ತಾಲೂಕು ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ತಿಪ್ಪಾಪುರ ಛತ್ರದ ಬಳಿ ಘಟನೆ ನಡೆದಿದೆ. ಮಧುಗಿರಿಯ ಶಿವಾನಂದ ಎಂಬುವರ ಪತ್ನಿಯಾಗಿರುವ 28 ವರ್ಷದ ಶ್ವೇತಾ ಇಂತಹ ಕೃತ್ಯವೆಸಗಿದ ಮಹಿಳೆ. ಮಾನಸಿಕ ಅಸ್ವಸ್ಥಳಾಗಿರುವ ಶ್ವೇತಾ ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು ಎಂದು ಹೇಳಲಾಗಿದೆ.

ಮನೆಯಲ್ಲಿ ಆಟವಾಡುತ್ತಿದ್ದ ತನ್ನ ಮಗುವಿನ ಕೈಯನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ರಕ್ತಸ್ರಾವದಿಂದ ಮಗು ಮೃತಪಟ್ಟಿದ್ದು, ನೆರೆಹೊರೆಯವರು ಮಾಹಿತಿ ತಿಳಿದು ಶ್ವೇತಾಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...