alex Certify ದಾರಿ ತಪ್ಪಿದ್ಲು ಪತಿಯಿಂದ ದೂರವಾಗಿದ್ದ ಮಹಿಳೆ: ಪ್ರಿಯಕರನಿಂದಲೇ ಘೋರ ಕೃತ್ಯ, ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ್ಲು ಪತಿಯಿಂದ ದೂರವಾಗಿದ್ದ ಮಹಿಳೆ: ಪ್ರಿಯಕರನಿಂದಲೇ ಘೋರ ಕೃತ್ಯ, ಮೂವರು ಅರೆಸ್ಟ್

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನನ್ನು ಕೊಲೆ ಮಾಡಿ ವಿಷಯ ಮುಚ್ಚಿಟ್ಟಿದ್ದ ಆರು ತಿಂಗಳ ನಂತರ ತಾಯಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಕೋಲೇಔಟ್ ಠಾಣೆ ಪೊಲೀಸರು ಬಾಲಕನ ತಾಯಿ ಹಾಗೂ ಮಡಿವಾಳ ಠಾಣೆ ರೌಡಿಶೀಟರ್ ಸುನಿಲ್ ಮತ್ತು ಆತನ ಪ್ರೇಯಸಿ ಸಿಂಧೂ ಅವರನ್ನು ಬಂಧಿಸಿದ್ದಾರೆ.

ಫೆಬ್ರವರಿ 7 ರಂದು ಸುನಿಲ್ ತನ್ನ ಪ್ರೇಯಸಿಯೊಂದಿಗೆ ಸೇರಿಕೊಂಡು 10 ವರ್ಷದ ಬಾಲಕನನ್ನು ಕೊಲೆ ಮಾಡಿ ಆಕೆಯ ತಾಯಿಯೊಂದಿಗೆ ಸೇರಿ ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಶವ ಎಸೆದಿದ್ದರು.

ಮೈಕೋಲೇಔಟ್ ನಲ್ಲಿ ವಾಸವಾಗಿದ್ದ ಮಹಿಳೆ ಗಂಡನಿಂದ ದೂರವಾಗಿದ್ದು, ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ನಡುವೆ ಆಕೆ ರೌಡಿಶೀಟರ್ ಸುನಿಲ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದು, ಆಕೆಗಿಂತ ಮೊದಲೇ ಸಿಂಧೂ ಜೊತೆಗೆ ಸುನಿಲ್ ಸಂಬಂಧ ಹೊಂದಿದ್ದ. ತಾಯಿಯ ಅಕ್ರಮ ಸಂಬಂಧದ ಬಗ್ಗೆ ಮಗ ಪ್ರಶ್ನಿಸಿದ್ದು ಆತನನ್ನು ಸುನಿಲನ ಮನೆಯಲ್ಲಿ ತಾಯಿ ಬಿಟ್ಟಿದ್ದಳು. ಸುನಿಲ ಬಾಲಕನ ಮೇಲೆ ದೌರ್ಜನ್ಯ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ.

ಬಳಿಕ ಸುನಿಲ ಬಾಲಕನ ತಾಯಿ ಮತ್ತು ಪ್ರೇಯಸಿ ಸಿಂಧೂ ಜೊತೆಗೆ ಸೇರಿಕೊಂಡು ಕಾರ್ ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿ ತಮಿಳುನಾಡಿನ ಬರಗೂರ್ ಸಮೀಪದ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ. ಏನೂ ಆಗಿಲ್ಲವೆಂಬಂತೆ ಸುಮ್ಮನಾಗಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಸಂಬಂಧಿಕರು ಮತ್ತು ಬಾಲಕನ ತಂದೆಯ ಕುಟುಂಬದವರು ಬಾಲಕನ ಕುರಿತಾಗಿ ಪ್ರಶ್ನಿಸಿದಾಗ ಸ್ನೇಹಿತರ ಮನೆಯಲ್ಲಿ ಮಗನನ್ನು ಬಿಟ್ಟಿರುವುದಾಗಿ ಮಹಿಳೆ ಹೇಳಿದ್ದಾಳೆ.

ನಂತರ ಕಾಣೆಯಾಗಿರುವುದಾಗಿ ತಿಳಿಸಿದ್ದಾಳೆ. ದೂರು ನೀಡದ ಬಗ್ಗೆ ಸಂಬಂಧಿಕರು ಪ್ರಶ್ನಿಸಿದಾಗ ಸುಳ್ಳು ಹೇಳಿಕೊಂಡೇ ಬಂದಿದ್ದ ಮಹಿಳೆ ಕೊನೆಗೆ ಆಗಸ್ಟ್ 25 ರಂದು ಸುನಿಲ್ ಜೊತೆಗೆ ದೂರು ನೀಡಲು ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾಳೆ. 6 ತಿಂಗಳ ನಂತರ ದೂರು ನೀಡಲು ಬಂದಿರುವ ಅನುಮಾನದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...