alex Certify ಪುಟ್ಟ ಮಗನೊಂದಿಗೆ ಆಟಿಕೆ ಕಾರಿನಲ್ಲಿ ಕುಳಿತು ತೆರಳಿದ ತಂದೆ | Viral Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗನೊಂದಿಗೆ ಆಟಿಕೆ ಕಾರಿನಲ್ಲಿ ಕುಳಿತು ತೆರಳಿದ ತಂದೆ | Viral Video

ತಂದೆ ಹಾಗೂ ಮಕ್ಕಳ ನಡುವಿನ ಬಂಧವನ್ನು ವರ್ಣಿಸಲು ಸಾಧ್ಯವಿಲ್ಲ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಈ ಮಾತಿಗೆ ಹೇಳಿ ಮಾಡಿಸಿದಂತಹ ವಿಡಿಯೋವೊಂದು ವೈರಲ್​ ಆಗಿದೆ.

ತಂದೆ ಹಾಗೂ ಮಗ ಇಬ್ಬರು ಊಟಕ್ಕೆಂದು ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಇದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಅಚ್ಚರಿಯ ವಿಚಾರ ಏನಂದ್ರೆ ಮಗನ ಮಿನಿ ಆಟಿಕೆ ಕಾರಿನಲ್ಲಿ ಕುಳಿತು ತಂದೆ, ಮಗನೊಂದಿಗೆ ಹೋಟೆಲ್​ಗೆ ತೆರಳಿದ್ದಾರೆ.

ಅಂದಹಾಗೆ ಈ ಮಿನಿಕಾರನ್ನು ಪುತ್ರನೇ ಡ್ರೈವ್​ ಮಾಡಿದ್ದಾನೆ ಹಾಗೂ ತಂದೆ ಪಕ್ಕದಲ್ಲಿ ಕುಳಿತಿದ್ದಾರೆ. ಆಟಿಕೆ ಕಾರಿನಲ್ಲಿ ಕುಳಿತುಕೊಂಡೇ ಪುತ್ರ ಊಟ ಆರ್ಡರ್​ ಮಾಡಿದ್ದಾನೆ. ಇದೀಗ ಈ ಮುದ್ದಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಇದು ಹಳೆ ವಿಡಿಯೋವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡ್ತಿದೆ.

ಇವರ ಪ್ರೀತಿ ಎದುರು ದೊಡ್ಡ ದೊಡ್ಡ ಕಾರುಗಳೇ ಸಣ್ಣ ಎನಿಸುತ್ತಿದೆ ಎಂದು ಈ ವಿಡಿಯೋವನ್ನು ಪೋಸ್ಟ್​ ಮಾಡಿದ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಮಿಲಿಯನ್​ಗಟ್ಟಲೇ ವೀವ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...