alex Certify Bigg Boss ಮನೆಗೆ ಎಂಟ್ರಿ ಕೊಡಲು ಸಜ್ಜಾದ ಸ್ಟಾರ್ ಗಳು ಯಾರು ಗೊತ್ತಾ….? ಇಲ್ಲಿದೆ ಸಂಭವನೀಯರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Bigg Boss ಮನೆಗೆ ಎಂಟ್ರಿ ಕೊಡಲು ಸಜ್ಜಾದ ಸ್ಟಾರ್ ಗಳು ಯಾರು ಗೊತ್ತಾ….? ಇಲ್ಲಿದೆ ಸಂಭವನೀಯರ ಪಟ್ಟಿ

ಬೆಂಗಳೂರು: ನಾಳೆಯಿಂದ ಬಿಗ್ ಬಾಸ್ ಕನ್ನಡ ಒಟಿಟಿ ಸೀಜನ್-1 ಆರಂಭವಾಗಲಿದ್ದು, ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ ಲಭ್ಯವಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಈ ಕಾರ್ಯಕ್ರಮ ವೂಟ್ ನಲ್ಲಿ ಪ್ರಸಾರವಾಗಲಿದ್ದು, 24ಗಂಟೆಗಳ ಲೈನ್ ರನ್ ಆಗಲಿದೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಜನ್ 1 ಪ್ರವೇಶಿಸುವ ಸ್ಪರ್ಧಿಗಳು ಯಾರೆಲ್ಲ ಇರಬಹುದು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಹಬ್ಬಿದ್ದು, ಸಾಕಷ್ಟು ನಟ-ನಟಿಯರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಿರುತೆರೆಯ ಖ್ಯಾತ ನಟಿ ನಮ್ರತಾ ಗೌಡ, ನಟ ನಿರ್ದೇಶಕ ನವೀನ್ ಕೃಷ್ಣ, ನಟಿ ರೇಖಾ ವೇದವ್ಯಾಸ್, ನಟ ತರುಣ್, ದಿಲೀಪ್ ರಾಜ್, ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್, ನ್ಯೂಸ್ ಆಂಕರ್ ಚಂದನ್ ಶರ್ಮಾ, ಪತ್ರಕರ್ತ ಸೋಮಣ್ಣ ಮಾಚಿಮಾಡ, ಕಾಫಿನಾಡು ಚಂದು ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

ಒಟ್ಟಾರೆ ಬಿಗ್ ಬಾಸ್ ಒಟಿಟಿ ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬುದು ನಾಳೆಯ ಕಾರ್ಯಕ್ರಮದಲ್ಲಿ ಖಚಿತವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...