alex Certify ಸಿದ್ದಾರ್ಥ್ ಮಲ್ಹೋತ್ರಾ ಆತ್ಮೀಯ ಸ್ನೇಹಿತ ಅಂದ್ರು ಕಿಯಾರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದಾರ್ಥ್ ಮಲ್ಹೋತ್ರಾ ಆತ್ಮೀಯ ಸ್ನೇಹಿತ ಅಂದ್ರು ಕಿಯಾರಾ

ಇತ್ತೀಚೆಗೆ ಬಾಲಿವುಡ್ ನಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ನಡುವಿನ ಗಾಸಿಪ್ ಹರಿದಾಡುತ್ತಿತ್ತು. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅಂತೆಲ್ಲಾ ರೂಮರ್ ಹಬ್ಬಿತ್ತು. ಆದರೀಗ ಸಿದ್ಧಾರ್ಥ್ ಅವರು ತನ್ನ ಹತ್ತಿರದ ಸ್ನೇಹಿತರಲ್ಲಿ ಒಬ್ಬರು ಅಂತಾ ಹೇಳುವ ಮುಖಾಂತರ ಕಿಯಾರಾ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸಿದ್ದಾರ್ಥ್ ಮತ್ತು ಕಿಯಾರಾ ಎರಡು ವರ್ಷ ಕಾಲ ಒಟ್ಟಿಗೆ ಇದ್ದರೂ ಅವರಿಬ್ಬರೂ ಕೇವಲ ಸ್ನೇಹಿತರು ಎಂದು ಸಮರ್ಥಿಸಿಕೊಂಡಿದ್ದಾರೆ. ಅದಾಗ್ಯೂ ಹೊಸ ವರ್ಷದ ಸಮಯದಲ್ಲಿ ಮಾಲ್ಡೀವ್ಸ್ ಭೇಟಿ ಮತ್ತಷ್ಟು ವದಂತಿಗಳನ್ನು ಸೃಷ್ಟಿಸಿದೆ. ದ್ವೀಪರಾಷ್ಟ್ರದಲ್ಲಿದ್ದ ಬಗ್ಗೆ ಯಾವುದೇ ಚಿತ್ರ ಪೋಸ್ಟ್ ಮಾಡದಿದ್ದರೂ, ಅವರು ಮುಂಬೈನಿಂದ ಹೊರಟು ಒಟ್ಟಿಗೆ ಮರಳಿರುವುದು ಇವೆಲ್ಲಕ್ಕೂ ಪುಷ್ಠಿ ಕೊಟ್ಟಂತಾಗಿದೆ.

ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್

ಇನ್ನು ಸಂದರ್ಶನವೊಂದರಲ್ಲಿ ಕಿಯಾರಾ ಮೊದಲು ಸಿದ್ದಾರ್ಥ್ ಜೊತೆಗಿನ ತನ್ನ ವೃತ್ತಿಪರ ಸಂಬಂಧದ ಬಗ್ಗೆ ಮಾತನಾಡಿದರು. ‘’ಸಹನಟನಾಗಿ ಸಿದ್ದಾರ್ಥ್ ತಮ್ಮ ಕೆಲಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಅಲ್ಲದೆ ಪೂರ್ವಸಿದ್ಧತೆಯನ್ನು ಕೂಡ ಮಾಡುತ್ತಾರೆ. ಇದು ನಾನು ಚಲನಚಿತ್ರದಲ್ಲಿ ಕೆಲಸ ಮಾಡಲು ಇಷ್ಟಪಡುವ ರೀತಿಯನ್ನು ಹೋಲುತ್ತದೆ. ಹೀಗಾಗಿ ನಾವು ತುಂಬಾ ಚೆನ್ನಾಗಿ ಹೊಂದಿಕೊಂಡೆವು’’ ಎಂದು ಹೇಳಿದ್ದಾರೆ.

ಸಿದ್ದಾರ್ಥ್ ಅವರ ಗುಣಗಳ ಬಗ್ಗೆ ಕಿಯಾರಾ ಹರ್ಷ ವ್ಯಕ್ತಪಡಿಸಿದ್ದಾರೆ. ಒಬ್ಬ ಸ್ನೇಹಿತೆಯಾಗಿ, ಉದ್ಯಮದಲ್ಲಿ ಆತ ತನ್ನ ಹತ್ತಿರದ ಸ್ನೇಹಿತರಲ್ಲಿ ಒಬ್ಬ ಎಂದು ಸ್ಪಷ್ಟನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...