alex Certify ಕಾರ್ನಿವಾಲ್‌ನ ಪರಿಷ್ಕೃತ ಅವತರಣಿಕೆ ಬಿಡುಗಡೆ ಮಾಡಿದ ಕಿಯಾ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ನಿವಾಲ್‌ನ ಪರಿಷ್ಕೃತ ಅವತರಣಿಕೆ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

 

ತನ್ನ ಬ್ರಾಂಡ್‌ನ ಬಹೋಪಯೋಗಿ ವಾಹನ ಕಾರ್ನಿವಾಲ್‌ನ ಪರಿಷ್ಕೃತ ವರ್ಶನ್‌ಅನ್ನು ಕಿಯಾ ಇಂಡಿಯಾ ಗುರುವಾರ ಬಿಡುಗಡೆ ಮಾಡಿದೆ. ಈ ಕಾರಿನ ಆರಂಭಿಕ ಬೆಲೆ 24.95 ಲಕ್ಷ ರೂಪಾಯಿ (ಎಕ್ಸ್‌-ಶೋರೂಂ) ಇದೆ.

ಕಿಯಾದ ಹೊಸ ಕಾರ್ಪೋರೇಟ್ ಲೋಗೋದಲ್ಲಿ ಕಾಣಿಸಿಕೊಳ್ಳಲಿರುವ ಕಾನಿರ್ವಾಲ್‌‌ ಇದೀಗ ನಾಲ್ಕು ಭಿನ್ನ ಅವತಾರಗಳಲ್ಲಿ ಲೊಮೌಸಿನ್‌‌ ಪ್ಲಸ್, ಲಿಮೌಸಿನ್, ಪ್ರೆಸ್ಟೀಜ್ ಮತ್ತು ಪ್ರೀಮಿಯಂ ಶ್ರೇಣಿಯಲ್ಲಿ ಬರಲಿದೆ.

ಜನವರಿ 2022ರವರೆಗೆ ʼವರ್ಕ್‌ ಫ್ರಮ್‌ ಹೋಮ್‌ʼ ಮುಂದುವರಿಸಿದೆ ಈ ಕಂಪನಿ

“ನಿರೀಕ್ಷೆಗಳನ್ನು ಮೀರಿ ಗ್ರಾಹಕರಿಗೆ ಅದ್ಭುತವಾದ ಅನುಭವ ಕೊಡುವ ಕಿಯಾದ ಪ್ರಯತ್ನದ ಭಾಗವಾಗಿ ಕಾರ್ನಿವಾಲ್‌ನ ಪರಿಷ್ಕೃತ ಅವತಾರ ಬರುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಂದಿನಿಂದ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿರುವ ಕಾರ್ನಿವಾಲ್ ಮೂಲಕ ಭಾರತಿಯ ಗ್ರಾಹಕರಿಗೆ ಇನ್ನಷ್ಟು ಅನುಕೂಲಗಳನ್ನು ಒದಗಿಸಲು ಇಚ್ಛಿಸುತ್ತೇವೆ,” ಎಂದು ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಟೇ ಜಿನ್ ಪಾರ್ಕ್ ತಿಳಿಸಿದ್ದಾರೆ.

ದೇಶದಲ್ಲಿ ಇದುವರೆಗೂ ಕಾರ್ನಿವಾಲ್‌‌ನ 8,000 ಘಟಕಗಳನ್ನು ಮಾರಾಟ ಮಾಡಲಾಗಿದೆ ಎಂದು ಪಾರ್ಕ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...