alex Certify ದಶಕಗಳಿಂದ ಕೋಣೆಯಲ್ಲಿ ಕೂಡಿಟ್ಟಿದ್ದ ಮಹಿಳೆಯನ್ನು ಕೊನೆಗೂ ವರಿಸಿದ ಪ್ರಿಯತಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಶಕಗಳಿಂದ ಕೋಣೆಯಲ್ಲಿ ಕೂಡಿಟ್ಟಿದ್ದ ಮಹಿಳೆಯನ್ನು ಕೊನೆಗೂ ವರಿಸಿದ ಪ್ರಿಯತಮ..!

ಪ್ರಿಯತಮೆ ಸಜಿತಾಳನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲಿ ಅಡಗಿಸಿಟ್ಟು ಸುದ್ದಿಯಾಗಿದ್ದ ರೆಹಮಾನ್​ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ನೆನ್ಮಾರ ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದಾನೆ.

ಸಜಿತಾ ಅತ್ಯಂತ ಸರಳವಾದ ಸಲ್ವಾರ್​ ಧರಿಸಿದ್ದರೆ, ರೆಹಮಾನ್​ ಪಂಚೆ ಹಾಗೂ ಶರ್ಟ್ ಧರಿಸಿದ್ದರು. ರೆಹಮಾನ್​ ಜೊತೆಯಲ್ಲಿ ಮದುವೆಗೆ ಸಹಿ ಹಾಕುವ ವೇಳೆಯಲ್ಲಿ ಸಜಿತಾ ಖುಷಿಯಲ್ಲೇ ಇದ್ದಂತೆ ಕಂಡುಬಂತು. ಸಿಹಿ ಹಂಚಿದ ದಂಪತಿ ತಮ್ಮ ಮದುವೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಇಂದಿನಿಂದ ನಾವು ಸಂತೋಷವಾಗಿ ಹಾಗೂ ಶಾಂತಿಯುತ ಜೀವನವನ್ನು ನಡೆಸಲು ಇಚ್ಛಿಸುತ್ತೇವೆ ಎಂದು ರೆಹಮಾನ್​ ಹೇಳಿದ್ದಾರೆ. ಸಜಿತಾ ಪೋಷಕರು ಕೂಡ ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಈ ಮದುವೆಗೆ ವಿರೋಧ ವ್ಯಕ್ತಪಡಿಸಿರುವ ರೆಹಮಾನ್ ಪೋಷಕರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಮದುವೆಯಲ್ಲಿ ಭಾಗಿಯಾಗಿದ್ದ ನೆನ್ಮಾರಾ ಶಾಸಕ ಕೆ. ಬಾಬು ಈ ವಿಚಾರವಾಗಿ ಮಾತನಾಡಿದ್ದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂಬ ಈ ದಂಪತಿಯ ಕನಸಿಗೆ ಎಲ್ಲಾ ರೀತಿಯ ಸಹಕಾರ ಸಿಗಲಿದೆ ಎಂದು ಹೇಳಿದರು.

ಆಯಿಯೂರು ಗ್ರಾಮದ ನಿವಾಸಿಯಾದ ಈ ದಂಪತಿ ಈಗ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ಇದಕ್ಕೂ ಮುನ್ನ ದಶಕಗಳ ಕಾಲ ಸಜಿತಾ ಒಂದು ಸಣ್ಣ ಕೋಣೆಯಲ್ಲಿ ಅವಿತಿದ್ದರು. ಕೆಲ ತಿಂಗಳ ಹಿಂದಷ್ಟೇ ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಮಹಿಳೆಯನ್ನು ಕೋಣೆಯಲ್ಲಿ ಕೂಡಿಡುವುದು ಕಾನೂನಿಗೆ ವಿರುದ್ಧವಾಗಿರೋದ್ರಿಂದ ಕೇರಳ ಪೊಲೀಸರು ರೆಹಮಾನ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯನ್ನು ಕೂಡಿಟ್ಟಿದ್ದ ಕೋಣೆಯಲ್ಲಿ ಸ್ನಾನಗೃಹದ ಸೌಕರ್ಯ ಇರಲಿಲ್ಲ. ರಾತ್ರಿ ವೇಳೆ ಕಿಟಕಿ ಮೂಲಕ ಸಜಿತಾ ಹೊರಬರುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆಯಲ್ಲಾ ಈ ಕೋಣೆ ಮುಚ್ಚಿಯೇ ಇರುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...