alex Certify ಮಹಿಳೆಯನ್ನು ಕೊಂದು ಅಡುಗೆ ಕೋಣೆಯಲ್ಲೇ ಶವ ದಹನ ಮಾಡಿದ ಪಾಪಿ ಅಂದರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯನ್ನು ಕೊಂದು ಅಡುಗೆ ಕೋಣೆಯಲ್ಲೇ ಶವ ದಹನ ಮಾಡಿದ ಪಾಪಿ ಅಂದರ್..​..!

49 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್​ ಇನ್​ ಪಾರ್ಟ್ನರ್​​ನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ ಅಡುಗೆ ಮನೆಯಲ್ಲೇ ಶವವನ್ನು ಸುಟ್ಟ ಆಘಾತಕಾರಿ ಘಟನೆಯೊಂದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವರದಿಯಾಗಿದೆ.

ಆರೋಪಿಯನ್ನು ಬಿನೋಯ್​ ಎಂದು ಗುರುತಿಸಲಾಗಿದ್ದು ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈತ ಕಳೆದ 26 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಕಾಣೆಯಾಗಿದ್ದ ಮಹಿಳೆಯ ಶವವು ಸೆಪ್ಟೆಂಬರ್​ 3ರಂದು ಪತ್ತೆಯಾಗಿತ್ತು. ಮೃತ ಮಹಿಳೆಯನ್ನು 45 ವರ್ಷದ ಸಿಂಧು ಬಾಬು ಎಂದು ಗುರುತಿಸಲಾಗಿದೆ.

ಈಕೆ ಬಿನೋಯ್​ ನಿವಾಸದಲ್ಲಿ ತನ್ನ ಪುತ್ರ ಅಖಿಲ್​ ಜೊತೆ ಬಾಡಿಗೆಗೆ ವಾಸವಿದ್ದರು ಎನ್ನಲಾಗಿದೆ.

ಬಿನೋಯ್​ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಿಲ್ಲೆಯ ಪ್ಲಾಂಟೇಷನ್​ ಪ್ರದೇಶದಲ್ಲಿ ಅವಿತಿದ್ದ. ಆದರೆ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿದ್ದ ಪೊಲೀಸರು ಸ್ಥಳೀಯರ ನೆರವಿನಿಂದ ಬಿನೋಯ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂಧು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆಗಸ್ಟ್​ 12ರಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸಿಂಧು ಹುಡುಕಾಟ ಶುರು ಮಾಡಿದ ವೇಳೆ ಮೃತದೇಹ ಪತ್ತೆಯಾಗಿದೆ.

ಪತಿಯಿಂದ ದೂರಾಗಿದ್ದ ಸಿಂಧು ಬಿನೋಯ್​ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆದರೆ ಸಿಂಧು ತನ್ನ ಪತಿಯ ಮೇಲೆ ಸಹಾನುಭೂತಿ ತೋರಿದ್ದೇ ಬಿನೋಯ್​ ಕೋಪಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಬಿನೋಯ್​ ಸಿಂಧುಳನ್ನು ಕೊಲೆಗೈದಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...