alex Certify ಮದ್ಯ ಖರೀದಿಗಾಗಿ ಕಿಲೋಮೀಟರ್‌ ಗಟ್ಟಲೆ ಕ್ಯೂ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಖರೀದಿಗಾಗಿ ಕಿಲೋಮೀಟರ್‌ ಗಟ್ಟಲೆ ಕ್ಯೂ….! ವಿಡಿಯೋ ವೈರಲ್

ಕೊರೊನಾ 2ನೆ ಅಲೆಯ ತಡೆಗಾಗಿ ಸಾಕಷ್ಟು ನಿರ್ಬಂಧಗಳನ್ನ ವಿಧಿಸಿದ್ದ ವಿವಿಧ ರಾಜ್ಯ ಸರ್ಕಾರಗಳು ಇದೀಗ ಡೆಡ್ಲಿ ವೈರಸ್​ನ ಆರ್ಭಟ ಕೊಂಚ ತಗ್ಗಿರುವ ಹಿನ್ನೆಲೆಯಲ್ಲಿ ಒಂದೊಂದೇ ನಿರ್ಬಂಧಗಳನ್ನ ತೆರವುಗೊಳಿಸ್ತಾ ಇವೆ. ಅದೇ ರೀತಿ ಕೇರಳ ಸರ್ಕಾರ ಕೂಡ ಜೂನ್​ 17ರಿಂದ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ನೀಡಿದೆ.

ಸರ್ಕಾರ ಈ ರೀತಿಯ ಆದೇಶ ನೀಡುತ್ತಿದ್ದಂತೆಯೇ ಮದ್ಯ ಪ್ರಿಯರು ಅಂಗಡಿಗಳ ಮುಂದೆ ಕಿಲೋಮೀಟರ್​ಗಟ್ಟಲೇ ಸಾಲನ್ನ ಹಚ್ಚಿದ್ದು ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗ್ತಿವೆ.

ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡಿ ಮದ್ಯದ ಬಾಟಲಿಗಳನ್ನ ಪಾರ್ಸೆಲ್​ ತೆಗೆದುಕೊಂಡು ಹೋಗಲು ಸರ್ಕಾರ ಅನುಮತಿ ನೀಡಿದ ಬಳಿಕ ಎರ್ನಾಕುಲಂ ಜಿಲ್ಲೆಯ ಪೆರುಂಬವೂರಿನಲ್ಲಿ ಜನತೆ ಕಿಲೋಮೀಟರ್​ಗಟ್ಟಲೇ ಉದ್ದದ ಸರದಿ ಸಾಲಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು.

ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆಯಾದರೂ ದೇಶದಲ್ಲಿ ಅತೀ ಹೆಚ್ಚು ದೈನಂದಿನ ಕೇಸುಗಳ ಸಾಲಿನಲ್ಲಿ 2ನೆ ಸ್ಥಾನದಲ್ಲಿದೆ. ಕೇರಳದಲ್ಲಿ ಲಾಕ್​ಡೌನ್​ ಆದೇಶಗಳಲ್ಲಿ ಗುರುವಾರದಿಂದ ಕೊಂಚ ಸಡಿಲಿಕೆ ಮಾಡಲಾಗಿದೆಯಾದರೂ ವೀಕೆಂಡ್​ನಲ್ಲಿ ಸಂಪೂರ್ಣ ಲಾಕ್​ಡೌನ್​ ಆದೇಶ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತು ಮಾರಾಟಗಾರರಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7ಗಂಟೆಯವರೆಗೆ ವ್ಯಾಪಾರ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ.

Kerala Witnesses Huge Rush At Liquor Outlets After Easing of Covid-restrictions

These visuals are from Perumbavoor in Ernakulam District of Kerala. People rushed to buy liquor as the Kerala government allowed reopening state-run beverage outlets in a restricted manner starting June 17. Long queues were witnessed in many of the liquor outlets across the state with a clear violation of the COVID protocols.

Posted by Indiatimes on Thursday, June 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...