alex Certify ವಿಪಕ್ಷದವರು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಾರೆ; ಸಂಸದರ ಅಮಾನತ್ತಿಗೆ ನಟಿ ಹೇಮಾಮಾಲಿನಿ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಪಕ್ಷದವರು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಾರೆ; ಸಂಸದರ ಅಮಾನತ್ತಿಗೆ ನಟಿ ಹೇಮಾಮಾಲಿನಿ ಪ್ರತಿಕ್ರಿಯೆ

ಸಂಸತ್ ಭವನದಲ್ಲಿ ಭದ್ರತೆ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗದ್ದಲವೆಬ್ಬಿಸಿದ ವಿಪಕ್ಷ ಸಂಸದರ ಅಮಾನತು ಬಗ್ಗೆ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸಂಸದೆ ಹೇಮಾ ಮಾಲಿನಿ ಮಂಗಳವಾರ ನೂರಕ್ಕೂ ಹೆಚ್ಚು ವಿಪಕ್ಷ ಸಂಸದರನ್ನು ಅಮಾನತುಗೊಳಿಸಿದ್ದಕ್ಕೆ ನೇರ ಉತ್ತರ ನೀಡಿದ್ದಾರೆ . ವಿಪಕ್ಷದವರು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಾರೆ, ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆಯಲ್ಲಿ ಮಥುರಾವನ್ನು ಪ್ರತಿನಿಧಿಸುವ ನಟಿ-ಸಂದೆ ಹೇಮಮಾಲಿನಿ ಸಂಸತ್ತು ಕಲಾಪವನ್ನ ಅಡ್ಡಿಪಡಿಸುವುದು ಮತ್ತು ಮೋದಿ ಸರ್ಕಾರವನ್ನು ಬೇರುಸಹಿತ ಕಿತ್ತೊಗೆಯುವುದು ಪ್ರತಿಪಕ್ಷಗಳ ಏಕೈಕ ಗುರಿಯಾಗಿದೆ ಎಂದು ಆರೋಪಿಸಿದರು.

“ವಿಪಕ್ಷದವರನ್ನು ಅಮಾನತು ಮಾಡಿದ್ದಾರೆ ಎಂದರೆ ಅವರು ತಪ್ಪು ಮಾಡಿದ್ದಾರೆ ಎಂದರ್ಥ. ಸಂಸತ್ತಿನ ನಿಯಮಗಳ ಪ್ರಕಾರ ಅವರು ಕೆಲಸ ಮಾಡಬೇಕು. ಆದರೆ ವಿಪಕ್ಷದವರು ಆ ರೀತಿ ಕೆಲಸ ಮಾಡಲಿಲ್ಲ, ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ, ಇದು ಸರಿಯಾಗಿಯೇ ಇದೆ” ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಮತ್ತು ಉನ್ನತ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡಿರುವ ಪ್ರಮುಖ ವಿರೋಧ ಪಕ್ಷವಾದ INDIA ಮೈತ್ರಿಕೂಟದ ನಿನ್ನೆಯ ಸಭೆಯ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. “ಮೋದಿ ಸರ್ಕಾರವನ್ನು ಬೇರುಸಹಿತ ಕಿತ್ತುಹಾಕುವುದು ಅವರ ಗುರಿಯಾಗಿದೆ. ಅವರು ಅದಕ್ಕಾಗಿ ತುಂಬಾ ಶ್ರಮಿಸುತ್ತಿದ್ದಾರೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ” ಎಂದರು.

ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆಯ 150 ಕ್ಕೂ ಅಧಿಕ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಕಳೆದ ವಾರ ಲೋಸಭೆಯಲ್ಲಿ ಬಣ್ಣದ ಹೊಗೆ ದಾಳಿಗೆ ಭದ್ರತಾ ವೈಫಲ್ಯ ಕಾರಣವೆಂದು ಆರೋಪಿಸಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ ನಂತರ ಸಂಸದರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಯಿತು. ಸಂಸದರ ಅಮಾನತು ವಿರೋಧಿಸಿ ಇದೇ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು INDIA ಮೈತ್ರಿಕೂಟ ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...