alex Certify ಧೋನಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಗಂಗೂಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಗಂಗೂಲಿ

ಟೀಂ ಇಂಡಿಯಾದ ಮಾಜಿ ಆಟಗಾರರಾದ ಸೌರವ್​ ಗಂಗೂಲಿ ಹಾಗೂ ವಿರೇಂದ್ರ ಸಿಂಗ್​ ಸೆಹ್ವಾಗ್​​ ʼಕೌನ್​ ಬನೇಗಾ ಕರೋಡ್​ಪತಿʼ ಸೀಸನ್​ 13ರ ವಿಶೇಷ ಎಪಿಸೋಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸೆಹ್ವಾಗ್​ ಹಾಗೂ ಗಂಗೂಲಿ ಕ್ರಿಕೆಟ್​ ಲೋಕದ ಸಾಕಷ್ಟು ಇಂಟರೆಸ್ಟಿಂಗ್​ ಮಾಹಿತಿಯನ್ನು ಶೇರ್​ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಂಗೂಲಿ ಹಾಗೂ ಸೆಹ್ವಾಗ್​​ 25 ಲಕ್ಷ ರೂಪಾಯಿ ಗಳಿಸಿದ್ದಾರೆ. ಈ ಹಣವನ್ನು ಲಾಭ ರಹಿತ ಉದ್ದೇಶಕ್ಕೆ ಬಳಸುವುದಾಗಿ ಹೇಳಿದ್ದಾರೆ.

ಆಟದ ವೇಳೆ ಗಂಗೂಲಿ ಹಾಗೂ ಸೆಹ್ವಾಗ್​ ಎಲ್ಲಾ ನಾಲ್ಕು ಲೈಫ್​ ಲೈನ್​ನ್ನು ಬಳಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್​​ ಧೋನಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಲೈಫ್ ​ಲೈನ್​ ಬಳಸಿಕೊಂಡಿದ್ದರು. ʼಟೀಂ ಇಂಡಿಯಾದ ಯಾವ ಮಾಜಿ ನಾಯಕ ಕೇವಲ ಟ್ರಾವಿಸ್​ ಡೌವ್ಲಿನ್​​ರ ವಿಕೆಟ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ..?ʼ ಎಂಬ ಪ್ರಶ್ನೆಗೆ ಎಂ.ಎಸ್.​ ಧೋನಿ, ಮೊಹಮ್ಮದ್​ ಅಜರುದ್ದೀನ್​, ಸುನೀಲ್​ ಗವಾಸ್ಕರ್​ ಹಾಗೂ ರಾಹುಲ್​ ದ್ರಾವಿಡ್​ ಎಂಬ ನಾಲ್ಕು ಆಯ್ಕೆಯನ್ನು ನೀಡಲಾಗಿತ್ತು.

ಈ ಪ್ರಶ್ನೆಗೆ ಉತ್ತರ ನೀಡಲು ಗಂಗೂಲಿ ಹಾಗೂ ಸೆಹ್ವಾಗ್​ ತಡಕಾಡಿದ್ದಾರೆ. ಗಂಗೂಲಿ, ಗವಾಸ್ಕರ್​ ಎಂದು ಹೇಳಿದ್ರೆ ಅಜರುದ್ದೀನ್​ ಎಂದು ಸೆಹ್ವಾಗ್​ ಹೇಳಿದ್ದಾರೆ. ಆದರೆ ಈ ಎರಡೂ ಉತ್ತರದ ಬಗ್ಗೆಯೂ ಖಚಿತತೆ ಇಲ್ಲದ ಕಾರಣ ಲೈಫ್ ​​ಲೈನ್​ ಮೊರೆ ಹೋಗಿದ್ದರು .

ಲೈಫ್​ಲೈನ್​ನಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರ ಧೋನಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು, 2009ರ ಚಾಂಪಿಯನ್​ ಟ್ರೋಫಿಯಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಪಂದ್ಯದಲ್ಲಿ ಧೋನಿ ಬೌಲಿಂಗ್​ ಮಾಡಲು ನಿರ್ಧರಿಸಿದ್ದರು. ತಮ್ಮ ವಿಕೆಟ್​ ಕೀಪಿಂಗ್​​ ಗ್ಲೌಸ್​ನ್ನು ದಿನೇಶ್​ ಕಾರ್ತಿಕ್​​ಗೆ ನೀಡಿದ ಧೋನಿ 2 ಓವರ್​​ಗಳಲ್ಲಿ ಡಾವ್ಲಿನ್​ ವಿಕೆಟ್​ ಕಬಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...