alex Certify ಕಾರ್ತೀಕ ಹುಣ್ಣಿಮೆಯಂದು ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತೀಕ ಹುಣ್ಣಿಮೆಯಂದು ಮಾಡಿ ಈ ಕೆಲಸ

Kartik Purnima 2021: Do this remedy on the day of Kartik Purnima, every  wish will be fulfilled

ಹಿಂದೂ ಧರ್ಮದಲ್ಲಿ ಕಾರ್ತಿಕ ಪೂರ್ಣಿಮೆಗೆ ಮಹತ್ವದ ಸ್ಥಾನವಿದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ವಿಶೇಷ. ಕಾರ್ತಿಕ ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಆದ್ರೆ ಲಕ್ಷ್ಮಿ ದೇವಿಗೆ ಈ ದಿನ ವಿಶೇಷ ಆದ್ಯತೆ ನೀಡಲಾಗುತ್ತದೆ. ಆರ್ಥಿಕ ವೃದ್ಧಿಗೆ, ಸಾಲದಿಂದ ಮುಕ್ತರಾಗಲು ಈ ದಿನ ಕೆಲವೊಂದು ಕೆಲಸವನ್ನು ಅವಶ್ಯಕವಾಗಿ ಮಾಡಬೇಕು.

ಈ ಬಾರಿ ನವೆಂಬರ್ 19ರಂದು ಕಾರ್ತೀಕ ಹುಣ್ಣಿಮೆ ಬಂದಿದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಗಂಗಾ ಅಥವಾ ಯಮುನಾ ನದಿಯಲ್ಲಿ ಸ್ನಾನ ಮಾಡಬೇಕು. ಈ ನದಿ ನೀರನ್ನು, ಬೇರೆ ನೀರಿಗೆ ಬೆರೆಸಿ ಕೂಡ ಸ್ನಾನ ಮಾಡಬಹುದು. ನಂತ್ರ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು.

ಕಾರ್ತಿಕ ಪೂರ್ಣಿಮೆಯಂದು ಮನೆಯ ಮುಖ್ಯ ದ್ವಾರದಲ್ಲಿ ತೋರಣ ಕಟ್ಟಬೇಕು. ಬಾಗಿಲಿನ ಎರಡೂ ಬದಿಯಲ್ಲಿ ದೀಪಗಳನ್ನು ಇರಿಸಬೇಕು. ರಂಗೋಲಿ ಹಾಕಬೇಕು.

ಕಾರ್ತಿಕ ಪೂರ್ಣಿಮೆಯಂದು ಪವಿತ್ರ ನದಿಗಳಲ್ಲಿ ದೀಪಗಳನ್ನು ಬಿಡಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು ಇದನ್ನು ಮಾಡಲಾಗುತ್ತದೆ.  ಕಾರ್ತಿಕ ಪೂರ್ಣಿಮೆಯಂದು ತಾಯಿ ಲಕ್ಷ್ಮಿಯನ್ನು ಪೂಜಿಸಬೇಕು. ಸಂಜೆ ದೀಪ ಬೆಳಗಿದ ನಂತ್ರ ಖೀರ್ ಅರ್ಪಿಸಬೇಕು. ಸಕ್ಕರೆ ಮಿಠಾಯಿ ಮತ್ತು ಗಂಗಾಜಲ ಬೆರೆಸಿ ನೈವೇದ್ಯ ಮಾಡಬೇಕು. ಲಕ್ಷ್ಮಿ ದೇವಿ ಅಶ್ವತ್ಥ ಮರದಲ್ಲಿ ನೆಲೆಸಿದ್ದಾಳೆ ಎನ್ನಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಅಶ್ವತ್ಥ ಮರಕ್ಕೆ ಹಾಲು ಮತ್ತು ನೀರನ್ನು ಅರ್ಪಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...