alex Certify ಬಿಗ್ ನ್ಯೂಸ್: ವಿಮಾನದಲ್ಲಿ ಜನಿಸಿದ ಮಗುವಿಗೆ ಭರ್ಜರಿ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ವಿಮಾನದಲ್ಲಿ ಜನಿಸಿದ ಮಗುವಿಗೆ ಭರ್ಜರಿ ಗಿಫ್ಟ್

ನವದೆಹಲಿ: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಜನಿಸಿದ ಮಗುವಿಗೆ ಅಜೀವ ಪರ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇಂಡಿಗೋ ಸಂಸ್ಥೆ ಮಗುವಿಗೆ ಉಚಿತ ಪ್ರಯಾಣದ ಘೋಷಣೆ ಮಾಡಿದೆ.

ದೆಹಲಿ -ಬೆಂಗಳೂರು ನಡುವೆ ಸಂಚರಿಸುವ ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅವಧಿಗೆ ಮುನ್ನವೇ ಅವರಿಗೆ ಹೆರಿಗೆಯಾಗಿತ್ತು. ವಿಮಾನ ಹಾರಾಟದಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಸುರಕ್ಷಿತವಾಗಿ ಹೆರಿಗೆಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ.

ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಇಂಡಿಗೋ ಸಿಬ್ಬಂದಿ ಆತ್ಮೀಯ ಸ್ವಾಗತ ನೀಡಿದ್ದರು. ಸಾಮಾನ್ಯವಾಗಿ ವಿಮಾನದಲ್ಲಿ ಜನಿಸುವ ಮಕ್ಕಳಿಗೆ ವಿಮಾನಯಾನ ಸಂಸ್ಥೆಗಳಿಂದ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಪರಿಪಾಠ ಬೆಳೆದು ಬಂದಿದೆ. ಅದೇ ರೀತಿ ಇಂಡಿಗೋ ಸಂಸ್ಥೆ ಕೂಡ ವಿಮಾನದಲ್ಲಿ ಜನಿಸಿದ ಮಗುವಿಗೆ ಉಚಿತ ಪ್ರಯಾಣ ಟಿಕೆಟ್ ನೀಡಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...