alex Certify ʼಪಲ್ಸ್ ಆಕ್ಸಿಮೀಟರ್ʼ‌ ಎಂದರೇನು…?ಇದರ ಬಳಕೆ ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಲ್ಸ್ ಆಕ್ಸಿಮೀಟರ್ʼ‌ ಎಂದರೇನು…?ಇದರ ಬಳಕೆ ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್‌-19 ಸೋಂಕಿನ ಸಂಬಂಧ ಕಾಣಿಸಿಕೊಳ್ಳುತ್ತಿರುವ ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ಜನಸಾಮಾನ್ಯ ವಲಯದಲ್ಲಿ ಸಾಕಷ್ಟು ಆತಂಕಗಳು ಎದುರಾಗುತ್ತಿರುವ ನಡುವೆಯೇ, ಆಗಾಗ ಕಾಣಿಸಿಕೊಳ್ಳುವ ಥರಾವರಿ ವಿಶ್ಲೇಷಣೆಗಳ ವರದಿಗಳು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡುತ್ತಿವೆ.

ಕೊರೊನಾ ವೈರಸ್ ಸೋಂಕಿತರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಇರುವ ಕಾರಣ ಆಗಾಗ ಆಮ್ಲಜನಕ ಪ್ರಮಾಣವನ್ನು ಪರೀಕ್ಷೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜಾಗತಿಕ ಆರೋಗ್ಯ ತಜ್ಞರು ವಾರ್ನ್ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ದೇಹದ ತಾಪಮಾನ ಪರೀಕ್ಷೆ ಮಾಡಿಕೊಳ್ಳುವ ಥರ್ಮಾಮೀಟರ್‌ನಂತೆ ಆಮ್ಲಜನಕ ಪ್ರಮಾಣ ಪರೀಕ್ಷಿಸಬಲ್ಲ ಆಕ್ಸಿ ಮೀಟರ್‌ ಸಹಾಯಕವಾಗಲಿದೆ ಎಂದು ಕೆಲ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ನಾಡಿ ಬಡಿತದ ಅಂದಾಜಿನ ಮೇಲೆ ದೇಹದಲ್ಲಿ ಇರುವ ಆಮ್ಲಜನಕದ ಪ್ರಮಾಣವನ್ನು ತಿಳಿಸಬಲ್ಲ ಈ ಸಾಧನವನ್ನು ಪಲ್ಸ್‌ ಆಕ್ಸಿಮೀಟರ್‌ ಎಂದು ಕರೆಯಲಾಗುತ್ತದೆ. ಈ ಸಾಧನದ ಕ್ಲಿಪ್ ‌ಅನ್ನು ಒತ್ತಿ, ಅದರ ಮಧ್ಯೆ ನಿಮ್ಮ ಬೆರಳನ್ನು ಇಟ್ಟಲ್ಲಿ, ಸೆಕೆಂಡುಗಳ ಒಳಗೆ ದೇಹದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ತಿಳಿಸುತ್ತದೆ. ಆರೋಗ್ಯವಂತರ ದೇಹದಲ್ಲಿ ಆಕ್ಸಿಜನ್‌ ಇಂಡೆಕ್ಸ್‌ 95-99ರ ನಡುವೆ ಇರುತ್ತದೆ.

ಈ ಸಾಂಕ್ರಮಿಕ ಲಾಕ್ ‌ಡೌನ್ ಅವಧಿಯಲ್ಲಿ ಆಕ್ಸಿಮೀಟರ್‌ ಬಳಕೆ ಉಪಯುಕ್ತವಾಗಲಿದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟರೆ ಮಿಕ್ಕವರು ಇಂಥದ್ದೆಲ್ಲಾ ಏನೂ ಬೇಕಿಲ್ಲ ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...