alex Certify Shocking News: ಕೊರೊನಾಗೆ ಬಲಿಯಾದ ಅಣ್ಣ-ತಮ್ಮ; ಗುಣಮುಖನಾಗಿ ಬರುವೆ ಎಂದು ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಪತಿ ಕೆಲವೇ ಗಂಟೆಗಳಲ್ಲಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಕೊರೊನಾಗೆ ಬಲಿಯಾದ ಅಣ್ಣ-ತಮ್ಮ; ಗುಣಮುಖನಾಗಿ ಬರುವೆ ಎಂದು ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಪತಿ ಕೆಲವೇ ಗಂಟೆಗಳಲ್ಲಿ ಸಾವು

ಮೈಸೂರು: ಕೊರೊನಾ ಅಟ್ಟಹಾಸಕ್ಕೆ ಬಲಿಯಾದವರ ಕುಟುಂಬಗಳ ಕಣ್ಣೀರ ಕಥೆ ಹೃದಯವನ್ನೇ ಹಿಂಡುವಂತಿದೆ. ಸೋಂಕಿಗೆ ತುತ್ತಾದ ಹಲವು ಕುಟುಂಬಗಳ ಬದುಕಿನ ಜಂಘಾಬಲವೇ ಉಡುಗಿ ಹೋಗುತ್ತಿದೆ. ಕೊರೊನಾ ಭೀಕರತೆಗೆ ಸಹೋದರರಿಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಬಂಡಿಪಾಳ್ಯದಲ್ಲಿ ನಡೆದಿದೆ.

ಒಂದೇ ವಾರದ ಅಂತರದಲ್ಲಿ ಅಣ್ಣ ಪ್ರಸಾದ್ ಹಾಗೂ ತಮ್ಮ ರಾಘವೇಂದ್ರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅಣ್ಣ ಪ್ರಸಾದ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವಾರದ ಹಿಂದೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಪ್ರಸಾದ್ ತಮ್ಮ ರಾಘವೇಂದ್ರ ಎಂಬುವವರಿಗೂ ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

 ಕೊರೊನಾಗೆ ಆಯುರ್ವೇದ ಔಷಧ; ವೈದ್ಯನ ಮನೆ ಮುಂದೆ ಮುಗಿಬಿದ್ದ ಜನರು; ಸರತಿ ಸಾಲಿನಲ್ಲಿ ನಿಂತ 10 ಸಾವಿರ ಮಂದಿ

ಇಂದು ಮುಂಜಾನೆಯಷ್ಟೇ ರಾಘವೇಂದ್ರ ಪತ್ನಿಗೆ ಹಾಗೂ ತನ್ನ ಇನ್ನೋರ್ವ ಸಹೋದರನಿಗೆ ವಿಡಿಯೋ ಕಾಲ್ ಮಾಡಿ ತಾನು ಗುಣಮುಖನಾಗುತ್ತಿದ್ದೇನೆ. ಶೀಘ್ರವೇ ಮನೆಗೆ ವಾಪಸ್ ಆಗುತ್ತೇನೆ ಎಂದು ಹೇಳಿದ್ದರು. ಆದರೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ರಾಘವೇಂದ್ರ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಹೋದರರಿಬ್ಬರೂ ಒಂದೇ ವಾರದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...