alex Certify ಬಿಗ್ ನ್ಯೂಸ್: ಸೆಪ್ಟಂಬರ್ 14 ರಿಂದ ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಸೆಪ್ಟಂಬರ್ 14 ರಿಂದ ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆ

ಬೆಂಗಳೂರು: ಸೆಪ್ಟಂಬರ್ 14 ಅಥವಾ 21 ರಿಂದ 10 ದಿನ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.

60 ವರ್ಷ ಮೇಲ್ಪಟ್ಟ 90 ಶಾಸಕರ ಪಟ್ಟಿಯನ್ನು ಸಚಿವಾಲಯ ಸಿದ್ಧಪಡಿಸಿದೆ. ಪ್ರೇಕ್ಷಕರ ಗ್ಯಾಲರಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಶಾಸಕರು ಕಡ್ಡಾಯವಾಗಿ ಗ್ಲೌಸ್, ಮಾಸ್ಕ್ ಧರಿಸಬೇಕಿದೆ. ವಿಧಾನಮಂಡಲ ಕಲಾಪಕ್ಕೆ ಸಚಿವರ ಗನ್ ಮ್ಯಾನ್, ಶಾಸಕರ ಆಪ್ತ ಸಹಾಯಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಅಧಿಕಾರಿಗಳು, ಪತ್ರಕರ್ತರಿಗೆ ಮಾತ್ರ ಅವಕಾಶ ನೀಡಲಾಗುವುದು. ಅಧಿವೇಶನಕ್ಕೆ ಸಿದ್ಧತೆ ಕೈಗೊಂಡಿರುವ ಕುರಿತಾಗಿ ಮುಖ್ಯಮಂತ್ರಿಗೆ ಸ್ಪೀಕರ್ ಪತ್ರ ಬರೆದಿದ್ದಾರೆ. ಎರಡು ಕುರ್ಚಿಗಳ ನಡುವೆ ಮೆಷ್ ಅಳವಡಿಕೆ ಮಾಡಲಾಗುವುದು. ಗ್ಯಾಲರಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಹೇಳಲಾಗಿದ್ದು, ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಅಧಿವೇಶನ ನಡೆಸುವ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...