alex Certify RTE ಪ್ರವೇಶ: ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RTE ಪ್ರವೇಶ: ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕಲಬುರಗಿ: ಪ್ರಸಕ್ತ 2020-21ನೇ ಸಾಲಿಗೆ ಆರ್.ಟಿ.ಇ. ಅಡಿಯಲ್ಲಿ ಶಾಲೆಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲಿಚ್ಛಿಸುವ ಮಕ್ಕಳ ಪಾಲಕರು ತಾವು ವಾಸಿಸುವ (ಸಂಬಂಧಪಟ್ಟ) ವಾರ್ಡ್‍ನ್ನು ಮಾತ್ರ ಆನ್‍ಲೈನ್‍ನಲ್ಲಿ ಆಯ್ಕೆ ಮಾಡಿಕೊಂಡು ಇಲಾಖೆಯ www.schooleducation.kar.nic.in ವೆಬ್‍ಸೈಟ್‍ನಲ್ಲಿ 2020ರ ಜೂನ್ 24 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಉತ್ತರ ವಲಯದ ನೋಡಲ್ ಅಧಿಕಾರಿಗಳಾದ ಅರ್ಜುನ ಹತ್ತಿ ಇವರ ಮೊಬೈಲ್ ಸಂಖ್ಯೆ 9686643922ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...