alex Certify ಗ್ಯಾಂಗ್ ರೇಪ್: ಆಟೋ ಚಾಲಕ ಸೇರಿ ನಾಲ್ವರಿಂದ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಂಗ್ ರೇಪ್: ಆಟೋ ಚಾಲಕ ಸೇರಿ ನಾಲ್ವರಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ನೈಜಿರಿಯಾ ಮೂಲದ ಯುವತಿ ಮೇಲೆ ಆಟೋ ಚಾಲಕ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನಾಲ್ವರನ್ನು ಬಂಧಿಸಿದ್ದಾರೆ. ಆಟೋ ಚಾಲಕ ಶಿವಶಂಕರ್, ಶ್ರೀಧರ್, ಗೋಪಿ ಮತ್ತು ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ. 25 ವರ್ಷದ ನೈಜೀರಿಯಾ ಯುವತಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು ಎರಡು ತಿಂಗಳ ಹಿಂದೆ ಶಿವಶಂಕರ್ ಪರಿಚಯವಾಗಿದ್ದಾನೆ.

ಮೇ 10 ರಂದು ಕರೆ ಮಾಡಿ ಯುವತಿಯನ್ನು ಕರೆಸಿಕೊಂಡಿದ್ದ ಶಿವಶಂಕರ್ ಆಟೋದಲ್ಲಿ ಕರೆದುಕೊಂಡು ಹೊರಟಿದ್ದು, ಇದೇ ವೇಳೆ ಉಳಿದ ಮೂವರನ್ನು ಆಟೋ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಯುವತಿ ದೂರು ನೀಡಿದ್ದಾಳೆ. ಹಣಕಾಸಿನ ವಿಚಾರಕ್ಕೆ ಈ ರೀತಿ ಯುವತಿ ಆರೋಪ ಮಾಡುತ್ತಿರುವುದಾಗಿ ಆರೋಪಿಗಳು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...