alex Certify ನಾಳೆಯಿಂದಲೇ ಎಲ್ಲಾ ಸರ್ಕಾರಿ ಕಚೇರಿ ಓಪನ್, ಎಲ್ಲಾ ನೌಕರರು ಕೆಲಸಕ್ಕೆ ಹಾಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದಲೇ ಎಲ್ಲಾ ಸರ್ಕಾರಿ ಕಚೇರಿ ಓಪನ್, ಎಲ್ಲಾ ನೌಕರರು ಕೆಲಸಕ್ಕೆ ಹಾಜರ್

ಬೆಂಗಳೂರು: ಆರೆಂಜ್ ಮತ್ತು ಗ್ರೀನ್ ಜೋನ್ ಗಳ ಎಲ್ಲಾ ಜಿಲ್ಲೆಗಳ ಸರ್ಕಾರಿ ಕಚೇರಿಗಳು ಮೇ 4 ರ ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಶೇಕಡ 100 ರಷ್ಟು ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಮೇ 4 ರಿಂದ ಸರ್ಕಾರಿ ಇಲಾಖೆಗಳಲ್ಲಿನ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ರೆಡ್ ಜೋನ್ ಗಳಲ್ಲಿ ಅವಶ್ಯಕ ಸೇವೆಗಳ ಇಲಾಖೆಗಳ ಶೇಕಡ 100 ಮತ್ತು ಉಳಿದ ಇಲಾಖೆಗಳ ಶೇಕಡ 33 ರಷ್ಟು ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕಿದೆ. ಉಳಿದಂತೆ ಆರೆಂಜ್ ಮತ್ತು ಹಸಿರು ವಲಯದಲ್ಲಿ ಸರ್ಕಾರಿ ಕಚೇರಿ ಆರಂಭವಾಗಲಿದ್ದು, ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...