alex Certify ಸಂಬಂಧಿಯೊಂದಿಗೆ ಸೆಕ್ಸ್ ಗೆ ಸಹಕರಿಸುವಂತೆ ಪತ್ನಿಗೆ ಹಿಂಸೆ ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಯೊಂದಿಗೆ ಸೆಕ್ಸ್ ಗೆ ಸಹಕರಿಸುವಂತೆ ಪತ್ನಿಗೆ ಹಿಂಸೆ ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

ಬೆಂಗಳೂರು: ರಾಡ್ ನಿಂದ ಹೊಡೆದು ಪತಿಯನ್ನು ಹತ್ಯೆ ಮಾಡಿದ ಎರಡನೇ ಪತ್ನಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್(46) ಅವರನ್ನು ಹತ್ಯೆ ಮಾಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯಲ್ಲಿ ಸ್ವಾಮಿರಾಜ್ ಅವರನ್ನು ಹತ್ಯೆ ಮಾಡಿದ ಬಳಿಕ ಎರಡನೇ ಪತ್ನಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಹತ್ತಿರದ ಸಂಬಂಧಿಯೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪತಿ ಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪೊಲೀಸರ ಎದುರಿಗೆ ತಪ್ಪೊಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ 10 ವರ್ಷದಿಂದ ಜೊತೆಯಾಗಿ ಅವರು ಜೀವನ ಸಾಗಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪತಿಯನ್ನು ಹತ್ಯೆ ಮಾಡಿದ ಎರಡನೇ ಪತ್ನಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಶರಣಾದ ಈ ಪ್ರಕರಣದಲ್ಲಿ ಎರಡನೇ ಪತ್ನಿ ವಿರುದ್ಧ ಸ್ವಾಮಿರಾಜ್ ಮೊದಲ ಪತ್ನಿ ದೂರು ನೀಡಿದ್ದಾರೆ. ಸ್ವಾಮಿರಾಜ್ ಅವರ ಆಸ್ತಿಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...