alex Certify ಅಪ್ಪಂದಿರ ದಿನವೇ ಆಘಾತಕಾರಿ ಸುದ್ದಿ…! ನಿರಂತರ ಅತ್ಯಾಚಾರದಿಂದ ತಂದೆಯ ಮಗುವಿಗೆ ಜನ್ಮ ನೀಡಿದ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಂದಿರ ದಿನವೇ ಆಘಾತಕಾರಿ ಸುದ್ದಿ…! ನಿರಂತರ ಅತ್ಯಾಚಾರದಿಂದ ತಂದೆಯ ಮಗುವಿಗೆ ಜನ್ಮ ನೀಡಿದ ಪುತ್ರಿ

ಕೊಪ್ಪಳ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯಿಂದಲೇ ಹಲವಾರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಕೊಪ್ಪಳ ತಾಲೂಕಿನ ವೆಂಕಟಾಪುರ ಗ್ರಾಮದ ಆರೋಪಿ ತಂದೆಯ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಶ್ವ ಅಪ್ಪಂದಿರ ದಿನವೇ ಈ ಘಟನೆ ಬೆಳಕಿಗೆ ಬಂದಿದೆ. ತಂದೆಯ ಕಾಮದಾಸೆಗೆ ಬಲಿಯಾದ ಪುತ್ರಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ.

ಗಂಗಾವತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ವಿಷಯ ಗಮನಕ್ಕೆ ಬರುತ್ತಲೇ ಕೊಪ್ಪಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ಮತ್ತು ಆಕೆಯ ತಾಯಿ ತಂದೆಯ ಅತ್ಯಾಚಾರದಿಂದ ಮಗು ಜನಿಸಿರುವುದಾಗಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...